Home ಅಪರಾಧ ದಾಖಲೆ ಇಲ್ಲದೇ ಹಣ ಸಾಗಣೆ: ೨೭.೫೦ ಲಕ್ಷ ಜಪ್ತಿ

ದಾಖಲೆ ಇಲ್ಲದೇ ಹಣ ಸಾಗಣೆ: ೨೭.೫೦ ಲಕ್ಷ ಜಪ್ತಿ

0

ಬಳ್ಳಾರಿ; ದಾಖಲೆ‌ ಇಲ್ಲದೇ ಸಾಗಿಸಲಾಗುತ್ತಿದ್ದ ೨೭.೫೦ ಲಕ್ಷ ರೂ. ಮೊತ್ತವನ್ನು ಬಸಾಪೂರ ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆಯಲಾಗಿದೆ.
ಆಂಧ್ರದಿಂದ ಯಾವುದೇ ದಾಖಲೆ ಇಲ್ಲದೇ ಇಷ್ಟು ಮೊತ್ತದ ಹಣವನ್ನು ಕಾರಿನಲ್ಲಿ‌ ಸಾಗಿಸಲಾಗುತ್ತಿತ್ತು. ಚುನಾವಣೆ ಅಧಿಕಾರಿ‌ ರಾಜೇಶ್ ನೇತೃತ್ವದಲ್ಲಿ ತಪಾಸಣೆ ನಡೆಸಿದ ‌ಎಸ್ಎಸ್ ಟಿ ತಂಡದ ಅಧಿಕಾರಿಗಳು ಹಣದ ಮೂಲ ಮತ್ತು ದಾಖಲೆಗಳ ಹುಡುಕಾಟ ನಡೆಸಿದರು. ಆದರೆ ಯಾವುದೇ ದಾಖಲೆ ಇಲ್ಲದ್ದರಿಂದ ನಗದು‌ಹಣವನ್ನು ವಶಕ್ಕೆ ಪಡೆದ ಅಧಿಕಾರಿಗಳು ೧೦ ಲಕ್ಷ ರೂ.‌ಮೀರಿ ಹಣ ವರ್ಗಾವಣೆ ಪ್ರಕರಣವಾಗಿದ್ದರಿಂದ ಹೆಚ್ಚಿನ ತನಿಖೆಗಾಗಿ ಐಟಿ ಇಲಾಖೆಗೆ ವಹಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.

Exit mobile version