Home ಅಪರಾಧ ದರ್ಶನ್‌ ಬಂಧನ ಬೆನ್ನಲ್ಲೇ ಗೆಳತಿ ಪವಿತ್ರಾ ಗೌಡ ಕೂಡ ಪೊಲೀಸ್‌ ವಶಕ್ಕೆ!

ದರ್ಶನ್‌ ಬಂಧನ ಬೆನ್ನಲ್ಲೇ ಗೆಳತಿ ಪವಿತ್ರಾ ಗೌಡ ಕೂಡ ಪೊಲೀಸ್‌ ವಶಕ್ಕೆ!

0

ಬೆಂಗಳೂರು: ನಟ ದರ್ಶನ್‌ ಅವರನ್ನು ಪೊಲೀಸರು ಬಂಧಿಸಿದ ಬೆನ್ನಲ್ಲೇ ನಟಿ ಪವಿತ್ರಾ ಗೌಡ ಅವರನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿಯೇ ರೇಣುಕಾಸ್ವಾಮಿ ಎಂಬ ಯುವಕನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ 10 ಜನರನ್ನು ಬಂಧಿಸಲಾಗಿದೆ.
ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ ಆರೋಪಿಗಳು ಸುಮನಹಳ್ಳಿ ಬ್ರಿಡ್ಜ್ ಬಳಿ ಇರುವ ಸತ್ವ ಅಪಾರ್ಟ್ ಮೆಂಟ್ ಬಳಿ ರಾಜಕಾಲುವೆ ಎಸೆದಿದ್ದರು. ಬೆಳಗಿನ ಜಾವ ಅಪಾರ್ಟ್ ಮೆಂಟ್ ಸೆಕ್ಯೂರಿಟಿ ಮೃತದೇಹ ನೋಡಿ 112 ಕರೆ ಮಾಡಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದ. ಅಪರಿಚಿತ ಶವದ ಕುರಿತು ತನಿಖೆ ವೇಳೆ ಇಬ್ಬರು ಪೊಲೀಸರಿಗೆ ಶರಣಾಗಿದ್ದರು. ವಿಚಾರಣೆ ಮಾಡಿದಾಗ ವಿನಯ್ ಪಾತ್ರ ಬಯಲಿಗೆ ಬಂದಿತ್ತು. ವಿನಯ್ ಸೇರಿ ನಾಲ್ವರನ್ನ ಪೊಲೀಸರು ಅರೆಸ್ಟ್ ಮಾಡಿದ್ದರು. ಈ ವೇಳೆ ವಿನಯ್ ಜೊತೆಗೆ ನಟ ದರ್ಶನ್ ಇದ್ದಿದ್ದು ಸ್ಪಷ್ಟವಾಗಿತ್ತು. ವಿನಯ್ ಮತ್ತು ದರ್ಶನ್ ರಿಂದ ರೇಣುಕಾ ಸ್ವಾಮಿಗೆ ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿತ್ತು. ನಾಲ್ವರ ಹೇಳಿಕೆ ಆಧರಿಸಿ ನಟ ದರ್ಶನ್ ಅರೆಸ್ಟ್ ಮಾಡಲಾಗಿದೆ.

Exit mobile version