Home ತಾಜಾ ಸುದ್ದಿ ಜಿಲ್ಲಾಡಳಿತ ಭವನದಲ್ಲಿ ರಾಡ್ ಬಳಸಿ ವ್ಯಕ್ತಿಯಿಂದ ದಾಳಿ

ಜಿಲ್ಲಾಡಳಿತ ಭವನದಲ್ಲಿ ರಾಡ್ ಬಳಸಿ ವ್ಯಕ್ತಿಯಿಂದ ದಾಳಿ

0

ಬಾಗಲಕೋಟೆ: ವ್ಯಕ್ತಿಯೋರ್ವ ಜಿಲ್ಲಾಡಳಿತ ಭವನದ ಆವರಣದಲ್ಲಿ ರಾಡ್‌ನಿಂದ ಹಲ್ಲೆಗೆ ಯತ್ನಿಸಿ ಕಾರಿನ ಗಾಜು ಪುಡಿಪುಡಿಗೊಳಿಸಿರುವ ಘಟನೆ ಮಂಗಳವಾರ ನಡೆದಿದೆ. ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸಚಿವ ಆರ್.ಬಿ.ತಿಮ್ಮಾಪುರ ಅವರು ಅಧಿಕಾರಿಗಳ ಸಭೆ ಕರೆದಿದ್ದರು. ಸಚಿವರನ್ನು ಭೇಟಿಯಾಗಲು ಅವರ ಆಪ್ತ ಸುಭಾಷ್ ಪಾಟೀಲ ಎಂಬುವರು ಕಾರಿನಲ್ಲಿ ಆಗಮಿಸಿ ಜಿಲ್ಲಾಡಳಿತ ಭವನದೆದುರು ಮನವಿ ಸಲ್ಲಿಸಲು ನಿಂತಿದ್ದ ಕುತ್ಬುದ್ಧಿನ್ ಖಾಜಿ ಅವರೊಂದಿಗೆ ಮಾತನಾಡಿಸಲು ಕಾರು ನಿಲ್ಲಿಸಿದಾಗ ಏಕಾಏಕಿ ಬಂದ ವ್ಯಕ್ತಿ ಕಾರಿನ ಹಿಂಬದಿ ಗಾಜಿಗೆ ಹೊಡೆದು ಪುಡಿಗೊಳಿಸಿದ್ದಾನೆ. ಇದನ್ನು ಕಂಡು ಖಾಜಿ ನಾಲ್ಕಾರು ಹೆಜ್ಜೆ ಹಿಂದೆ ಬಂದಾಗ ಅವರ ಬಳಿಯ ರಾಡ್ ಬೀಸಿ ನಂತರ ನೆಲಕ್ಕೆ ಎಸೆದಿದ್ದಾನೆ. ಕೃತ್ಯವೆಸೆಗಿರುವ ವ್ಯಕ್ತಿ ಕಿವುಡ ಹಾಗೂ ಮೂಗ ಎಂದು ತಿಳಿದು ಬಂದಿದ್ದು ನವನಗರ ಠಾಣೆ ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದಾರೆ. ವ್ಯಕ್ತಿ ಈ ರೀತಿ ಹಲ್ಲೆಗೆ ಮುಂದಾಗಿರುವುದಕ್ಕೆ ಕಾರಣ ಮಾತ್ರ ನಿಗೂಢವಾಗಿದೆ. ಘಟನೆ ಜಿಲ್ಲಾಡಳಿತ ಭವನದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Exit mobile version