Home ನಮ್ಮ ಜಿಲ್ಲೆ ಕಲಬುರಗಿ ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಪ್ರವೇಶಕ್ಕೆ ನಿರ್ಬಂಧ

ಚಕ್ರವರ್ತಿ ಸೂಲಿಬೆಲೆ ಕಲಬುರಗಿ ಪ್ರವೇಶಕ್ಕೆ ನಿರ್ಬಂಧ

0

ಕಲಬುರಗಿ: ನಮೋ ಬ್ರಿಗೇಡ್ ಸಂಚಾಲಕ ,ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಕಮಲಾಪುರ ಗಡಿಯಲ್ಲಿ ಬುಧುವಾರ ಮಧ್ಯರಾತ್ರಿ ಒಂದು ಗಂಟೆಗೆ ತಡೆದ ಪ್ರಸಂಗ ಜರುಗಿದ್ದು, ಈ ಮಧ್ಯ ಪೊಲೀಸರು ಮತ್ತು ಅವರ ನಡುವೆ ಮಾತಿನ ಜಟಾಪಟಿ ಆಗಿದೆ. ಬಂದ ದಾರಿಗೆ ಸುಂಕ ವಿಲ್ಲ ಎಂಬಂತೆ ಮರಳಿ ಬೀದರ ಕಡೆಗೆ ಹಿಂತಿರುಗಿದ್ದಾರೆ ಎಂದು ಹೇಳಲಾಗುತ್ತಿದೆ.

ಬೀದರ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಲ್ಲಿ ಪ್ರಚೋದನಕಾರಿ ಭಾಷಣ ಮಾಡಿಕೊಂಡು ಹುಮನಾಬಾದ ಮಾರ್ಗವಾಗಿ ಕಲಬುರಗಿ ಜಿಲ್ಲೆ ಪ್ರವೇಶಿಸುತ್ತಿರುವಾಗ ಗಡಿಭಾಗದಲ್ಲಿ ಪ್ರವೇಶ ನಿರ್ಬಂಧ ಹೇರಲಾಗಿದೆ. ಬೆಂಗಳೂರಿನ ವಿಧಾನಸೌಧದ‌ ಮೊಗಸಾಲೆಯಲ್ಲಿ ನಡೆದ ಪಾಕಿಸ್ತಾನದ ಪರ ಘೋಷಣೆ ವಿಚಾರವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ಆಯುಕ್ತ ರೂಪೇಂದ್ರ ಕೌರ್ ಆದೇಶ ಹೊರಡಿಸಿದ್ದು, ಆ ಆದೇಶದಂತೆ ಪೊಲೀಸರು ಅವರನ್ನು ತಡೆದಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಮೋ ಭಾರತ ಕಾರ್ಯಕ್ರಮ ಕ್ಕೆ ಅವರು ಆಗಮಿಸುತ್ತಿದ್ದರು.

Exit mobile version