Home ಅಪರಾಧ ಖಾಸಗಿ ಬಸ್ ಉರುಳಿ ಮೂವರ ದುರ್ಮರಣ

ಖಾಸಗಿ ಬಸ್ ಉರುಳಿ ಮೂವರ ದುರ್ಮರಣ

0

ಚಿತ್ರದುರ್ಗ: ಖಾಸಗಿ ಬಸ್ ಪಲ್ಟಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಕಣಿವೆ ಬಳಿ ಭಾನುವಾರ ಮುಂಜಾನೆ ಈ ಘಟನೆ ಸಂಭವಿಸಿದೆ. ಹೊನ್ನಾವರ ಮೂಲದ ಜಗದೀಶ್ (೪೫), ಶಿವಮೊಗ್ಗ ತಾಲ್ಲೂಕಿನ ಸಾಗರದ ಗಣಪತಿ (೪೦) ಸಕಲೇಶಪುರದ ರೋಣಕ್‌ಸಿಂಗ್ (೨೪) ಮೃತಪಟ್ಟವರು. ಇನ್ನೊಬ್ಬರ ಹೆಸರು ತಿಳಿದಿಲ್ಲ. ಈ ಅಪಘಾತದಲ್ಲಿ ೩೩ ಪ್ರಯಾಣಿಕರು ಗಾಯಗೊಂಡಿದ್ದು ಚಿತ್ರದುರ್ಗ, ಶಿವಮೊಗ್ಗ, ಹೊಳಲ್ಕೆರೆ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ೩೬ ಪ್ರಯಾಣಿಕರಿದ್ದ ಖಾಸಗಿ ಬಸ್ ಹೋಗುತ್ತಿದ್ದ ವೇಳೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಕಣಿವೆ ಬಳಿ ಪಲ್ಟಿಯಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆ ಎತ್ತಿದರು. ಈ ವೇಳೆ ಯಲ್ಲಿಯೇ ಸ್ಥಳದಲ್ಲಿ ಮೂವರು ಮೃತಪಟ್ಟರು. ಕೆಲವರಿಗೆ ಕೈ ಕಾಲಿಗೆ, ತಲೆಗೆ ಪೆಟ್ಟಾ ಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

Exit mobile version