Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕೊನೆಗೂ ಪ್ರತಿಭಟನೆ ಕೈಬಿಟ್ಟ ಪೊಲೀಸರು

ಕೊನೆಗೂ ಪ್ರತಿಭಟನೆ ಕೈಬಿಟ್ಟ ಪೊಲೀಸರು

0

ಚಿಕ್ಕಮಗಳೂರು: ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ್ದ ಪೊಲೀಸರು ಭಾನುವಾರ ಬೆಳಗಿನ ಜಾವ ಪ್ರತಿಭಟನೆ ಕೈಬಿಟ್ಟಿದ್ದಾರೆ.

ಐ ಜಿ ಪಿ ಶನಿವಾರ ರಾತ್ರಿ ಬಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದ ಕೆಲವೇ ಕ್ಷಣಗಳಲ್ಲಿ ಮತ್ತೆ ಪ್ರತಿಭಟನೆ ಆರಂಭಿಸಿದ್ದ ಪೊಲೀಸರು ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸಲಾರಂಭಿಸಿದ್ದರು.

ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಪೊಲೀಸರು ಪ್ರತಿಭಟನೆಗೆ ಸಾಥ್ ನೀಡಿದ್ದರು. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮುಂದುವರಿಸಿದ್ದ ಪೊಲೀಸರು. ಕೊನೆಗೂ ಪೊಲೀಸರ ಬೇಡಿಕೆಗೆ ಸ್ಪಂದಿಸಿದ ಹಿರಿಯ ಅಧಿಕಾರಿಗಳು. ಹೀಗಾಗಿ ಭಾನುವಾರ ಬೆಳಗ್ಗೆ ಐದು ಮೂವತ್ತಕ್ಕೆ ಪ್ರತಿಭಟನೆ ಹಿಂಪಡೆದ ಪೊಲೀಸರು.

ಪೊಲೀಸರ ಪ್ರತಿಭಟನೆ ಹಿನ್ನೆಲೆಯಲ್ಲಿ ವಕೀಲರ ಮೇಲೆ ಪ್ರತ್ಯೇಕವಾಗಿ ನಾಲ್ಕು ಎಫ್ಐಆರ್ ದಾಖಲಿಸಿರುವ ಪೊಲೀಸ್ ಅಧಿಕಾರಿಗಳು. ಇದರ ಜೊತೆಗೆ ಈಗಾಗಲೇ ಅಮಾನತ್ತಾಗಿರುವ ಪೊಲೀಸರ ಅಮಾನತು ಆದೇಶ ಹಿಂಪಡೆಯಲು ಸಮಯವಕಾಶ ಕೇಳಿದ ಎಸ್ ಪಿ. ಬೆಳಗಿನ ಜಾವ ದೂರವಾಣಿ ಕರೆಯಲ್ಲಿ ಸಿಬ್ಬಂದಿಗಳ ಜೊತೆ ಮಾತನಾಡಿದ ಎಸ್ ಪಿ. ಹೀಗಾಗಿ ಪ್ರತಿಭಟನೆ ಹಿಂಪಡೆದ ಪೊಲೀಸ್ ಸಿಬ್ಬಂದಿಗಳು.

Exit mobile version