Home ಅಪರಾಧ ಕೈಲಾಶ್ ಖೇರ್ ಮೇಲೆ ಬಾಟಲ್ ಎಸೆದ ದುಷ್ಕರ್ಮಿಗಳು

ಕೈಲಾಶ್ ಖೇರ್ ಮೇಲೆ ಬಾಟಲ್ ಎಸೆದ ದುಷ್ಕರ್ಮಿಗಳು

0


ಬಳ್ಳಾರಿ:ಹಂಪಿ ಉತ್ಸವದ ಸಮಾರೋಪ ಸಮಾರಂಭ ಅಂತಿಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಕೈಲಾಶ್ ಖೇರ್ ಮೇಲೆ ಬಾಟಲಿ ಎಸೆದ ಘಟನೆ ನಡೆದಿದೆ.
ಉತ್ಸವದ ಮುಖ್ಯ ವೇದಿಕೆ ಶ್ರೀ ಗಾಯತ್ರಿ ಪೀಠ ವೇದಿಕೆಯಲ್ಲಿ ರಾತ್ರಿ ಸಂಗೀತ ಕಾರ್ಯಕ್ರಮ ನಡೆಸುತ್ತಿದ್ದ ವೇಳೆ ನೀರು ತುಂಬಿದ ಬಾಟಲ್ ಎಸೆಯಲಾಗಿದೆ. ಬಾಟಲ್ ಖೇರ್ ಸಮೀಪವೇ ಬಂದು ಬಿತ್ತು.
ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ದುಷ್ಕರ್ಮಿಗಳನ್ನು ಪತ್ತೆಮಾಡಿ, ಬಂಧಿಸಿದ್ದಾರೆ.
ಘಟನೆಯಿಂದ ವಿಚಲಿತರಾಗದೆ ಖೇರ್ ಕಾರ್ಯಕ್ರಮ ಮುಂದುವರಿಸಿದರು. ಭಯಗ್ರಸ್ತ ಜನರನ್ನು ಹುರಿದುಂಬಿಸಿ ಮತ್ತೆ ಗಾಯನ ಆರಂಭಿಸಿದರು.

Exit mobile version