Home ತಾಜಾ ಸುದ್ದಿ ಕೆಲವೇ ಗಂಟೆಗಳಲ್ಲಿ ಗ್ಯಾರಂಟಿ ಈಡೇರಿಕೆ

ಕೆಲವೇ ಗಂಟೆಗಳಲ್ಲಿ ಗ್ಯಾರಂಟಿ ಈಡೇರಿಕೆ

0

ಕೆಲವೇ ಗಂಟೆಗಳಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ನಮ್ಮ ಆಶ್ವಾಸನೆಗಳನ್ನು ಈಡೇರಿಸುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದ ಬಳಿಕ ವೇದಿಕೆಯಲ್ಲಿ ಮಾತನಾಡಿ ರಾಜ್ಯದ ಜನರಿಗೆ ಧನ್ಯವಾದ ಅರ್ಪಿಸಿದ ಅವರು, ಐದು ವರ್ಷಗಳ ಕಾಲ ಭ್ರಷ್ಟಾಚಾರ ಸರ್ಕಾರದಿಂದ ಎಲ್ಲರೂ ಬೇಸತ್ತಿದ್ದೀರಿ. ನಾವು ಭ್ರಷ್ಟಾಚಾರ ಮುಕ್ತ ಸರ್ಕಾರ ಕೊಡುತ್ತೇವೆ. ಎಲ್ಲರಿಗೂ ನೆರವಾಗುತ್ತೇವೆ. ನಿಮ್ಮ ಪ್ರೀತಿಯನ್ನು ಎಂದೂ ಮರೆಯಲ್ಲ. ಇದು ನಿಮ್ಮದೇ ಸರ್ಕಾರ ಎಂದರು.

Exit mobile version