Home ತಾಜಾ ಸುದ್ದಿ ಗ್ಯಾರಂಟಿ ಇಂದೇ ಜಾರಿಗೆ

ಗ್ಯಾರಂಟಿ ಇಂದೇ ಜಾರಿಗೆ

0

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ನೀಡಿದ್ದ ಐದು ಗ್ಯಾರಂಟಿಗಳನ್ನು ಇಂದೇ ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ಇಂದು ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಗ್ಯಾರಂಟಿಗಳಿಗೆ ಒಪ್ಪಿಗೆ ಪಡೆದು ಇಂದೇ ಆದೇಶ ಹೊರಡಿಸುತ್ತೇವೆ ಎಂದರು.
ಕಾಂಗ್ರೆಸ್‌ಗೆ ಸಿಕ್ಕಿರುವ ಜಯ ನಾಡಿನ ಜನತೆಗೆ ಸಿಕ್ಕ ಜಯ. ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತರಲು ಚುನಾವಣಾ ಪ್ರಚಾರ ನಡೆಸಿದ ಸರ್ವರಿಗೂ ಧನ್ಯವಾದ. ರಾಜ್ಯದ ಮಹಿಳೆಯರಿಗೆ, ಯುವಕರಿಗೆ ರೈತರಿಗೆ ಧನ್ಯವಾದ, ನಿಮ್ಮ ನಿರೀಕ್ಷೆಗೆ ತಕ್ಕಂತೆ ಆಡಳಿತ ಕೊಡುತ್ತೇವೆ. ಕೊಟ್ಟ ಐದು ಗ್ಯಾರಂಟಿಯನ್ನು ಇವತ್ತೇ ಸಚಿವ ಸಂಪುಟದಲ್ಲಿ ಆದೇಶ ಹೊರಡಿಸುತ್ತೇವೆ. ಕೊಟ್ಟ ಭರವಸೆಯನ್ನು ಈಡೇರಿಸಿಯೇ ತೀರುತ್ತೇವೆ ಎಂದು ಹೇಳಿದ್ದಾರೆ.

Exit mobile version