Home ಅಪರಾಧ ಕೆರೆಯಲ್ಲಿ ಮುಳುಗಿ ಮೂವರು ಸಾವು

ಕೆರೆಯಲ್ಲಿ ಮುಳುಗಿ ಮೂವರು ಸಾವು

0

ಚನ್ನಗಿರಿ: ತಾಲೂಕಿನ ಲಕ್ಷ್ಮಿಸಾಗರ ಗ್ರಾಮದ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮೂವರು ಮಹಿಳೆಯರು ಮುಳುಗಿ ಮೃತಪಟ್ಟಿರುವ ಘಟನೆ ಸೋಮವಾರ ಜರುಗಿದೆ.
ದೀಪಾರಾಣಿ(೨೭), ದಿವ್ಯ(೨೪) ಮತ್ತು ಚಂದನ(೧೮) ಮೃತಪಟ್ಟವರೆಂದು ಗುರುತಿಸಲಾಗಿದೆ. ದೀಪಾರಾಣಿ ಮತ್ತು ದಿವ್ಯ ಎಂಬುವರು ವಿವಾಹಿತರಾಗಿದ್ದು ಇಬ್ಬರಿಗೂ ಒಂದೊಂದು ಮಕ್ಕಳಿವೆ, ಚಂದನ ಎಂಬ ಯುವತಿ ಅವಿವಾಹಿತಳಾಗಿದ್ದಾಳೆ.
ಈ ಮೂರು ಜನರು ಬಟ್ಟೆ ತೊಳೆಯಲು ಗ್ರಾಮದ ಕೆರೆಗೆ ಹೋಗಿದ್ದಾಗ ಈ ಘಟನೆ ಸಂಭವಿಸಿದೆ. ಮೊದಲು ದೀಪಾರಾಣಿ ಕಾಲುಜಾರಿ ನೀರಿನಲ್ಲಿ ಬಿದ್ದಾಗ, ಆಕೆಯನ್ನು ಬದುಕಿಸಲು ದಿವ್ಯ ಪ್ರಯತ್ನಿಸುತ್ತಾಳೆ, ಆದರೆ ಆಕೆಯೂ ನೀರಿನಲ್ಲಿ ಮುಳುಗುತ್ತಿದ್ದಾಗ, ಚಂದನ ದಿವ್ಯಳನ್ನು ಬದುಕಿಸಲು ಪ್ರಯತ್ನ ನಡೆಸಿದಾಗ ಮೂವರೂ ನೀರಿನಲ್ಲಿ ಮುಳುಗಿ ಸಾವಿಗೀಡಾಗುತ್ತಾರೆ. ದಿವ್ಯ ಮತ್ತು ಚಂದನ ಇಬ್ಬರೂ ಸಹೋದರಿಯರಾಗಿದ್ದು, ದೀಪಾರಾಣಿ ಇನ್ನೊಂದು ಕುಟುಂಬದಕ್ಕೆ ಸೇರಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version