Home ನಮ್ಮ ಜಿಲ್ಲೆ ಕಲಬುರಗಿ ಕುಡಿದ ಮತ್ತಿನಲ್ಲಿ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

ಕುಡಿದ ಮತ್ತಿನಲ್ಲಿ ಈಜಲು ಹೋದ ಯುವಕ ನೀರಲ್ಲಿ ಮುಳುಗಿ ಸಾವು

0

ಕಲಬುರಗಿ: ಕುಡಿದ ಮತ್ತಿನಲ್ಲಿ ಈಜಲು ಹೋಗಿ ಮುಳುಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವುದನ್ನು ಸ್ನೇಹಿತರು ವಿಡಿಯೋ ಮಾಡಿದ್ದಾರೆ.
ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಪಟವಾಡ ಗ್ರಾಮದ ಬಳಿ ಘಟನೆ ನಡೆದಿದೆ. ಹೈದ್ರಾಬಾದ್ ಮೂಲದ ಮಹ್ಮದ್ ಸಾಜೀದ್ ಮೃತ ದುರ್ದೈವಿ. ಮಹ್ಮದ್‌ ತನ್ನ ಗೆಳೆಯರೊಂದಿಗೆ ಕಮಲಾಪುರ ಪಕ್ಕದ ದರ್ಗಾ ಜಾತ್ರೆಗೆ ಹೊರಟಿದ್ದ. ಮಾರ್ಗ ಮಧ್ಯೆ ಬ್ರಿಜ್ ಕಂ ಬ್ಯಾರೇಜಲ್ಲಿ ಈಜಲು ನೀರಿಗೆ ಇಳಿದಿದ್ದ. ಕಂಠ ಪೂರ್ತಿ ಕುಡಿದು ಅದೇ ಮತ್ತಿನಲ್ಲಿ ಈಜಲು ಹೋದ ಮಹ್ಮದ್‌ ನೀರಿನಲ್ಲಿ ಮುಳುಗಿದ್ದ. ಗೆಳೆಯರ ಕಣ್ಣೆದುರೇ ನೀರಲ್ಲಿ ಮುಳುಗಿ ಸಾವನ್ನಪ್ಪುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಬ್ರಿಜ್ ಮೇಲಿದ್ದ ಮಹ್ಮದ್‌ ಈಜುವುದನ್ನು ಇನ್ನೊಬ್ಬ ಗೆಳೆಯ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದ. ನೋಡನೋಡುತ್ತಿದ್ದಂತೆ ಮಹ್ಮದ್‌ ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ,

Exit mobile version