Home ತಾಜಾ ಸುದ್ದಿ ಕಿರುತೆರೆ ನಟ ಶ್ರೀಧರ್‌ ನಾಯಕ್‌ ನಿಧನ

ಕಿರುತೆರೆ ನಟ ಶ್ರೀಧರ್‌ ನಾಯಕ್‌ ನಿಧನ

0

ಬೆಂಗಳೂರು: ಕಿರುತೆರೆ ನಟ ಶ್ರೀಧರ್‌ ನಾಯಕ್‌ ನಿಧನ ಹೊಂದಿದ್ದಾರೆ. ನಟ ಶ್ರೀಧರ್‌ ನಾಯಕ್‌ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತ ಹೊಂದಿದ್ದಾರೆ. ಕಿರುತೆರೆಯ ಜೊತೆಗೆ
ಸುದೀಪ್ ಅವರ ಮ್ಯಾಕ್ಸ್‌ ಸಿನಿಮಾದಲ್ಲಿ ನಟನೆ ಮಾಡಿದ್ದ ಶ್ರೀಧರ್‌ ನಾಯಕ್‌ ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದು, ಆರ್ಥಿಕ ಪರಿಸ್ಥಿತಿ ಕೂಡಾ ಚೆನ್ನಾಗಿರಲಿಲ್ಲ. ಈ ಕಾರಣದಿಂದ ಅವರ ಸಹಾಯಕ್ಕಾಗಿ ನೆರವನ್ನು ಕೂಡಾ ಕೋರಿದ್ದು, ಹಲವು ಕಲಾವಿದರು ಆರ್ಥಿಕ ಸಹಾಯವನ್ನು ಮಾಡಿದ್ದರು, 47 ವರ್ಷ ವಯಸ್ಸಿನ ನಟ ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಸದ್ಯ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ.

Exit mobile version