Home ತಾಜಾ ಸುದ್ದಿ ಕಾವೇರಿ ಹೋರಾಟ : ಕರವೇಯಿಂದ ಪ್ರತಿಭಟನೆ

ಕಾವೇರಿ ಹೋರಾಟ : ಕರವೇಯಿಂದ ಪ್ರತಿಭಟನೆ

0

ಇಳಕಲ್: ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆದಿರುವ ಬಂದ್ ಪ್ರತಿಭಟನೆ ಅಂಗವಾಗಿ ಇಲ್ಲಿನ ಕರವೇ ಕಾರ್ಯಕರ್ತರು ಶುಕ್ರವಾರದಂದು ಮುಂಜಾನೆ ೧೧ ಗಂಟೆಗೆ ಕಂಠಿ ಸರ್ಕಲ್ ದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ವಂಕಲಕುಂಟಿ ನೇತೃತ್ವದಲ್ಲಿ ಸದಸ್ಯರಾದ ನಗರ ಅಧ್ಯಕ್ಷ ಅಶೋಕ ಪೂಜಾರಿ, ಬಸವರಾಜ ಅಂಗಡಿ, ಹಸನ ಕಲಕಬಂಡಿ,ಸಾಗರ ಪಟ್ಟಣಶೆಟ್ಟಿ, ಮಂಜುನಾಥ ಸರೂರ,ನಾಗರಾಜ ಗುಳೇದ, ಶರಣು ಬೀಳಗಿ, ವಿರೇಶ ಹೂಲಗೇರಿ, ನಿಂಗಪ್ಪ ಅಂಬಿಗೇರ,ಸಂತೋಷ ತುಂಬದ ಮತ್ತಿತರರು ಸೇರಿಕೊಂಡು ಪ್ರತಿಭಟನೆ ಮಾಡುತ್ತಾ ಘೋಷಣೆಗಳನ್ನು ಕೂಗುತ್ತಾ ನಡೆದರು.
ಪ್ರತಿಭಟನಾಕಾರರನ್ನು ನಗರದ ಸೆಂಟ್ರಲ್ ಸ್ಕೂಲಿನ ಬಳಿ ಮುಂಜಾಗ್ರತ ಕ್ರಮವಾಗಿ ಬಂಧಿಸಿ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಶಹರ್ ಪೋಲಿಸ್ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಎಸ್ ಆರ್ ನಾಯಕ ಪತ್ರಿಕೆಗೆ ತಿಳಿಸಿದರು ಅಪರಾಧ ವಿಭಾಗದ ಪಿಎಸ್‌ಐ ಶಾಂತಾ ಹಳ್ಳಿ ಸೇರಿದಂತೆ ಪೋಲಿಸರು ಬಿಗಿ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿದ್ದರು .

Exit mobile version