Home ತಾಜಾ ಸುದ್ದಿ ಕಾಲೇಜು ಆವರಣದಲ್ಲಿ ಪ್ರಾಂಶುಪಾಲ ನೇಣಿಗೆ ಶರಣು

ಕಾಲೇಜು ಆವರಣದಲ್ಲಿ ಪ್ರಾಂಶುಪಾಲ ನೇಣಿಗೆ ಶರಣು

0

ಬಾಗಲಕೋಟೆ : ಹುನಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ಆವರಣದಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ೧೪ ವರ್ಷಗಳಿಂದ ಇಳಕಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ೬ ತಿಂಗಳ ಹಿಂದಷ್ಟೇ ಹುನಗುಂದಕ್ಕೆ ವರ್ಗವಾಗಿ ಬಂದಿದ್ದರು. ಕಾಲೇಜಿನಲ್ಲಿ ಮಂಗಳವಾರ ‌ಅದ್ಧೂರಿ ಜಾನಪದ ಉತ್ಸವ ಹಮ್ಮಿಕೊಳ್ಳಲಾಗಿದ್ದು, ನಾಗರಾಜ ಅವರು ಸೋಮವಾರ ಅತಿಥಿಗಳಿಗೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿ ಬಂದಿದ್ದರು.
ಸೋಮವಾರ ಅವರು ಕಾಲೇಜಿನಲ್ಲೇ ವಾಸ್ತವ್ಯ ಮಾಡಿದ್ದು, ಮಂಗಳವಾರ ನಸುಕಿನ‌ ಜಾವ ಕಾಲೇಜಿನ ಮೆಟ್ಟಿಲುಗಳ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಹುನಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version