Home ನಮ್ಮ ಜಿಲ್ಲೆ ಕಲಬುರಗಿ ಅಪಹರಣ ಪ್ರಕರಣ: ಇಬ್ಬರು ಅಪಹರಣಕಾರರ ಬಂಧನ

ಅಪಹರಣ ಪ್ರಕರಣ: ಇಬ್ಬರು ಅಪಹರಣಕಾರರ ಬಂಧನ

0

ಕಲಬುರಗಿ: ವಿದ್ಯಾರ್ಥಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕರಿಬ್ಬರನ್ನು ಬಂಧಿಸುವಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಇಲ್ಲಿನ ಸಂತ್ರಾಸವಾಡಿ ಬಡಾವಣೆ ನಿವಾಸಿ ಅರುಣಕುಮಾರ ಭಜಂತ್ರಿ ಹಾಗೂ ಸೇಡಂ ತಾಲ್ಲೂಕಿನ ಬಟಗೇರಾ ಗ್ರಾಮದ ನಿವಾಸಿ ಲಕ್ಷ್ಮಣ್ ಭಜಂತ್ರಿ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಆಟೋ, ಬೈಕ್ ಮತ್ತು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಿರುವುದಕ್ಕೆ ವಿವಿ ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.

Exit mobile version