Home ನಮ್ಮ ಜಿಲ್ಲೆ ಚಿಕ್ಕಮಗಳೂರು ಅಪಘಾತ: ಜಾತ್ರೆಗೆ ಹೋಗುತ್ತಿದ್ದ ಯುವಕರು ಸಾವು

ಅಪಘಾತ: ಜಾತ್ರೆಗೆ ಹೋಗುತ್ತಿದ್ದ ಯುವಕರು ಸಾವು

0

ಅಜ್ಜಂಪುರ: ಜಾತ್ರೆಗೆ ಹೋಗುವ ಸಂದರ್ಭದಲ್ಲಿ ಬೈಕ್ ಮರಕ್ಕೆ ಡಿಕ್ಕಿ ಹೊಡೆದು ಯುವಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ತಮಟದಹಳ್ಳಿ ಗೇಟ್ ಬಳಿ ನಡೆದಿದೆ.
ಮೃತಪಟ್ಟವರನ್ನು ಪ್ರತಾಪ್(೨೮) ಹಾಗೂ ಗೋವಿಂದ(೩೦) ಎಂದು ಗುರುತಿಸಲಾಗಿದ್ದು, ಕಡೇ ದಿನದ ಜಾತ್ರೆಗೆ ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಗ್ರಾಮದಿಂದ ಮೃತ ಇಬ್ಬರು ಅತಿ ವೇಗವಾಗಿ ಬೈಕ್‌ನಲ್ಲಿ ಹೋಗುವ ಸಂದರ್ಭದಲ್ಲಿ ಬೈಕ್ ನಿಯಂತ್ರಣಕ್ಕೆ ಸಿಗದೆ ಹೋಗಿ ಮರಕ್ಕೆ ಡಿಕ್ಕಿ ಹೊಡೆದು ಅವಘಡ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಜ್ಜಂಪುರದ ಐತಿಹಾಸಿಕ ಅಂತರಘಟ್ಟೆ ಜಾತ್ರೆಯನ್ನು ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರು ಆಚರಿಸಿ ಸಂಭ್ರಮಿಸುತ್ತಾರೆ. ಈ ಜಾತ್ರೆಯು ಒಟ್ಟು ೧೧ ದಿನಗಳ ಕಾಲ ನಡೆಯುತ್ತಿದ್ದು ಇಂದು ಜಾತ್ರೆಯ ಕೊನೆ ದಿನವಾಗಿದೆ.

Exit mobile version