Home ಅಪರಾಧ ಅಪಘಾತ: ಇಬ್ಬರು ಗಂಭೀರ

ಅಪಘಾತ: ಇಬ್ಬರು ಗಂಭೀರ

0

ಬೆಳಗಾವಿ: ದ್ವಿಚಕ್ರ ವಾಹನ ಹಾಗೂ ಕಾರು ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರರು ಗಂಭೀರ ಗಾಯಗೊಂಡ ಘಟನೆ ಬೈಲಹೊಂಗಲ ತಾಲ್ಲೂಕಿನ ನಯಾನಗರ ಗ್ರಾಮದ ಮಲಪ್ರಭಾ ನದಿ ಸೇತುವೆ ಮೇಲೆ ಮಂಗಳವಾರ ನಡೆದಿದೆ.
ಬೈಲಹೊಂಗಲ ತಾಲ್ಲೂಕಿನ ಕಲಭಾಂವಿ ಗ್ರಾಮದ ದ್ವಿಚಕ್ರ ವಾಹನ ಸವಾರ ಸುರೇಶ ಭೀಮಶೆಪ್ಪ ಪೂಜೇರ(27), ಹಿಂಬದಿ ಸವಾರ ದೇವಪ್ಪ ಹನುಮಂತ ಅಲಕ್ಕನವರ(27), ಪಟ್ಟಿಹಾಳ ಗ್ರಾಮದ ಕಾರು ಚಾಲಕ ವಿರುಪಾಕ್ಷ ಚಂದರಗಿ ಗಂಭೀರ ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Exit mobile version