Home ಅಪರಾಧ ಅಣಬೆ ತಿಂದು ಐವರು ಅಸ್ವಸ್ಥ

ಅಣಬೆ ತಿಂದು ಐವರು ಅಸ್ವಸ್ಥ

0

ಕುಷ್ಟಗಿ: ಕೂಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾಣಿಸಿಕೊಂಡ ಹುಚ್ಚು ಅಣಬೆ ತಿಂದು ಐವರು ಅಸ್ವಸ್ಥಗೊಂಡಿರುವ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ.
ತಾಲೂಕಿನ ಎಂ ಗುಡದೂರು ಗ್ರಾಮದ ಕೂಲಿಕಾರ್ಮಿಕರಾದ ಅಕ್ಕಮ್ಮ ಔತೆದಾರ(೩೦), ಸೋಮವ್ವ ದೋಟಿಹಾಳ(೨೮), ಗಂಗವ್ವ ಕುರಿ(೨೫), ಶಿಲ್ಪಾ ಜೌತರದಾರ್(೩೪), ಶಿವಮ್ಮ ಗುಂಡಿಹಿಂದಲ್(೨೦) ಎನ್ನುವವರು ಶಾಖಾಪೂರು ಗ್ರಾಮದ ಸೀಮಾದಲ್ಲಿ ಮುತ್ತನಗೌಡ ಪೊಲೀಸ್‌ಪಾಟೀಲ್ ರವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುವಾಗ. ಕಾಣಿಸಿಕೊಂಡ ಹುಚ್ಚು ಅಣಬೆ(ಆಳೆಂಬೆ) ತಿಂದು ಅಸ್ವಸ್ಥಗೊಂಡಿದ್ದಾರೆ. ತಕ್ಷಣವೇ ಐವರನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

Exit mobile version