Home ತಾಜಾ ಸುದ್ದಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

0

ಯಾಲಕ್ಕಿ ನಾಡು ಹಾವೇರಿಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು ಅಕ್ಷರ ಜಾತ್ರೆಗೆ ಕನಕ-ಶರೀಫರ ನಾಡು ಸಜ್ಜಾಗಿದೆ. ಮುಖ್ಯಮಂತ್ರಿಗಳು ಹಾಗೂ ಕಸಾಪ ಅಧ್ಯಕ್ಷರ ತವರು ಜಿಲ್ಲೆಯೂ ಇದಾಗಿದ್ದರಿಂದ ಸಹಜವಾಗಿ ಕನ್ನಡಿಗರ ನಿರೀಕ್ಷೆಗಳೂ ಸಮ್ಮೇಳನದ ಮೇಲೆ ಹೆಚ್ಚಿದ್ದು ನಗರದಾದ್ಯಂತ ಕನ್ನಡದ ರಂಗು ಹರಡಿದೆ. ನೋಡಿದಲ್ಲೆಲ್ಲಾ ಕನ್ನಡ ಬಾವುಟ, ಧ್ವಜ, ಕಟೌಟ್‌ಗಳು ರಾರಾಜಿಸುತ್ತಿದ್ದು ಸಾಹಿತ್ಯ, ಸಂಸ್ಕೃತಿಯ ಚಿತ್ತಾರ ಅನಾವರಣಗೊಂಡಿದೆ. ತಳಿರು, ತೋರಣಗಳಿಂದ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.

Exit mobile version