Home ತಾಜಾ ಸುದ್ದಿ RSS ಪಥ ಸಂಚಲನ: ಕೇಸರಿಮಯಗೊಂಡ ಬಾಗಲಕೋಟೆ

RSS ಪಥ ಸಂಚಲನ: ಕೇಸರಿಮಯಗೊಂಡ ಬಾಗಲಕೋಟೆ

0

ಬಾಗಲಕೋಟೆ: ನಗರದ ವಿದ್ಯಾಗಿರಿಯಲ್ಲಿ ರವಿವಾರ ನಡೆದ ರಾಷ್ಟ್ರೀಯ ಸ್ವಯಂ ಸೇವಕರ ಸಂಘದ ಬಾಲಕರ ವಿಶೇಷ ಪಥಸಂಚಲನ ಗಮನಸೆಳೆಯಿತು.
ಅಥಣಿ ಕಲ್ಯಾಣ ಮಂಟಪದಿಂದ ಆರಂಭಗೊಂಡ ಮೆರವಣಿಗೆ ನಂತರ ಗೌರಿಶಂಕರ ಮಂಗಲ ಕಾರ್ಯಾಲಯದಲ್ಲಿ ಸಮಾವೇಶಗೊಂಡಿತು.
ಮೂರು ಘೋಷ ವಾಹಿನಿಗಳ ಹಿಂದೆ ಮಕ್ಕಳು ದಂಡ ಹಿಡಿದು ಶಿಸ್ತು ಬದ್ಧ ಹೆಜ್ಜೆ ಹಾಕಿ ಬಂದಾಗ ಜನರ ಹರ್ಷೋದ್ಗಾರ ಮುಗಿಲು‌ ಮುಟ್ಟಿತು. ಜನ ಚಪ್ಪಾಳೆ, ಪುಷ್ಪವೃಷ್ಠಿ, ಭಾರತ ಮಾತೆಗೆ ಜೈಕಾರದ ಮೂಲಕ ಸ್ವಾಗತಿಸಿದರು.
ನಂತರ ಗೌರಿಶಂಕರ ಮಂಗಲ ಕಾರ್ಯಾಲಯದಲ್ಲಿ ಪ್ರದರ್ಶನಿಗಳನ್ನು ಸ್ವಯಂ ಸೇವಕರು ನೀಡಿದರು. ಜಿಲ್ಲಾ ಸಂಘಚಾಲಕ ಡಾ.ಸಿ.ಎಸ್. ಪಾಟೀಲ, ದಿನೇಶಕುಮಾರ ಬೌದ್ಧಿಕ ನೀಡಿದರು.

RSS

Exit mobile version