Home ತಾಜಾ ಸುದ್ದಿ Amit Shah: ಚುನಾವಣಾ ಚಾಣಕ್ಯನ ನಿವೃತ್ತಿ ಮಾತು, ಮುಂದೇನು?

Amit Shah: ಚುನಾವಣಾ ಚಾಣಕ್ಯನ ನಿವೃತ್ತಿ ಮಾತು, ಮುಂದೇನು?

ಅಹಮದಾಬಾದ್: ಸಮಾರಂಭವೊಂದರಲ್ಲಿ ಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಮ್ಮ ನಿವೃತ್ತಿಯ ಕುರಿತಂತೆ ಮಾತನಾಡಿದ್ದಾರೆ. ಈ ದಿಢೀರ್ ಮಾತು ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸದಾ ಚುನಾವಣೆ, ರಾಜಕೀಯದಲ್ಲಿ ಬ್ಯುಸಿಯಾಗಿರುವ ಅಮಿತ್ ಶಾ ಮುಂದೇನು? ಮಾಡಲಿದ್ದಾರೆ? ಎಂಬ ಪ್ರಶ್ನೆ ಸಹಜ.

ರಾಜಸ್ಥಾನದಲ್ಲಿ ಸಹಕಾರ್ ಸಂವಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, “ನಾನು ನನ್ನ ನಿವೃತ್ತಿ ಜೀವನದ ಬಗ್ಗೆ ಯೋಚಿಸಿದ್ದೇನೆ. ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಮುಂದಿನ ಜೀವನವನ್ನು ಸಾವಯವ ಕೃಷಿ, ವೇದಗಳ ಪಠಣ, ಉಪನಿಷತ್ ಪಾರಾಯಣದಲ್ಲಿ ತೊಡಗಿಕೊಳ್ಳಲಿದ್ದೇನೆ” ಎಂದರು.

ಸದಾ ರಾಜಕೀಯದಲ್ಲಿ ಬ್ಯುಸಿಯಾಗಿರುವ ಅಮಿತ್ ಶಾ ನಿವೃತ್ತಿಯ ಬಳಿಕ ಏನು ಮಾಡಲಿದ್ದಾರೆ? ಎಂಬುದು ಎಲ್ಲರ ಪ್ರಶ್ನೆಯಾಗಿತ್ತು. ತಮ್ಮ ನಿವೃತ್ತಿಯ ಕುರಿತು ಮೊದಲ ಬಾರಿಗೆ ಅವರು ಮಾತನಾಡಿದ್ದು, ಓದು, ನೈಸರ್ಗಿಕ ಕೃಷಿಗೆ ತಮ್ಮ ಸಮಯವನ್ನು ಮೀಸಲಿಡುವುದಾಗಿ ಹೇಳಿದ್ದಕ್ಕೆ ಮೆಚ್ಚುಗೆಗಳು ವ್ಯಕ್ತವಾಗಿವೆ.

ಅಮಿತ್‌ ಶಾ ಅವರಿಗೆ ಓದುವ ಹವ್ಯಾಸ ಸಹ ಇದೆ. ಅವರ ಬಳಿ ಸುಮಾರು 8,000 ಪುಸ್ತಕಗಳು ಇವೆ. ಸದ್ಯ ಅವುಗಳನ್ನು ಓದಲು ಸಮಯವಿಲ್ಲ. ಅವರಿಗೆ ಶಾಸ್ತ್ರೀಯ ಸಂಗೀತದ ಬಗ್ಗೆಯೂ ಒಲವಿದೆ. ರಸಾಯನಿಕ ಗೊಬ್ಬರಗಳಿಂದ ಬೆಳೆದ ಗೋಧಿಯು ಬಿಪಿ, ಮಧುಮೇಹ, ಥೈರಾಯ್ಡ್‌ನಂತಹ ಜೀವನಶೈಲಿ ಅಸ್ವಸ್ಥತೆಗಳು ಮತ್ತು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಅಮಿತ್ ಶಾ ನೈಸರ್ಗಿಕ ಕೃಷಿಯ ಕುರಿತು ಮಾತನಾಡಿದ್ದಾರೆ.

“ನೈಸರ್ಗಿಕ ಕೃಷಿಯು ದೇಹವನ್ನು ರೋಗ ಮುಕ್ತವಾಗಿಸುವುದಲ್ಲದೆ, ಔಷಧಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ನೈಸರ್ಗಿಕ ಕೃಷಿಯು ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ” ಎಂದು ಪ್ರತಿಪಾದಿಸಿದರು.

Exit mobile version