Home ತಾಜಾ ಸುದ್ದಿ ಹರಿಪ್ರಸಾದ್​​ ಹೇಳಿಕೆಗೆ ಬೆಲೆ ಇಲ್ಲ

ಹರಿಪ್ರಸಾದ್​​ ಹೇಳಿಕೆಗೆ ಬೆಲೆ ಇಲ್ಲ

0

ಬಾಗಲಕೋಟೆ: ಹರಿಪ್ರಸಾದ್​​ ಹೇಳಿಕೆಗೆ ಹೆಚ್ಚು ಬೆಲೆ ಇಲ್ಲ. ಅವರ ಹೇಳಿಕೆಯನ್ನು ನಾವು​ ಗಂಭೀರವಾಗಿ ಪರಿಗಣಿಸಲ್ಲ ಎಂದು ಅಬಕಾರಿ ಸಚಿವ ಆರ್​.ಬಿ. ತಿಮ್ಮಾಪುರ ಹೇಳಿದ್ದಾರೆ.
ಸಿಎಂ ಆಯ್ಕೆ ಮಾಡುವುದು ಗೊತ್ತು, ಕೆಳಗೆ ಇಳಿಸುವುದು ಗೊತ್ತಿದೆ ಎಂದು ಸ್ವಪಕ್ಷದ ಎಂಎಲ್​ಸಿ ಬಿಕೆ ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ 136 ಶಾಸಕರ ಜೊತೆಗೆ ಹೈಕಮಾಂಡ್ ಬೆಂಬಲ ಕೂಡ ಇದೆ. ಹೀಗಾಗಿ ಒಬ್ಬರ ಮಾತಿಗೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ. ಹರಿಪ್ರಸಾದ ಹೇಳಿಕೆಯನ್ನು ನಾವು​ ಗಂಭೀರವಾಗಿ ಪರಿಗಣಿಸಲ್ಲ ಎಂದರು.

Exit mobile version