Home ತಾಜಾ ಸುದ್ದಿ ಸ್ವಾಮೀಜಿಗಳ ಜತೆ ಶೆಟ್ಟರ ಮಾತುಕತೆ

ಸ್ವಾಮೀಜಿಗಳ ಜತೆ ಶೆಟ್ಟರ ಮಾತುಕತೆ

0

ಕಾಂಗ್ರೆಸ್ ಸೇರ್ಪಡೆಯ ಬಳಿಕ ಹುಬ್ಬಳ್ಳಿಗೆ ಆಗಮಿಸಿದ ಜಗದೀಶ ಶೆಟ್ಟರ ಮಠ, ಸ್ವಾಮೀಜಿಗಳ ಭೇಟಿಗೆ ದೌಡಾಯಿಸಿದರು. ವಿಮಾನ ನಿಲ್ದಾಣದಿಂದ ನೇರವಾಗಿ ರಂಭಾಪುರಿ ಕಲ್ಯಾಣ ಮಂಟಪಕ್ಕೆ ತೆರಳಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಬಳಿಕ ಶ್ರೀಗಳ ಬಳಿ 30 ನಿಮಿಷಕ್ಕೂ ಹೆಚ್ಚು ಕಾಲ ರಹಸ್ಯ ಮಾತುಕತೆ ನಡೆಸಿದರು. ಅಲ್ಲಿಂದ ಮೂರುಸಾವಿರ ಮಠಕ್ಕೆ ಭೇಟಿ ನೀಡಿ ಜಗದ್ಗುರು ರಾಜಯೋಗಿಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಜಗದೀಶ ಶೆಟ್ಟರ ಜೊತೆಯೇ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹೆಜ್ಜೆ ಹಾಕಿದರು.

Exit mobile version