Home ತಾಜಾ ಸುದ್ದಿ ಸೇವಾ ಸಿಂಧು ಹೆಸರಲ್ಲಿ ನಕಲಿ ಆ್ಯಪ್‌: ಎಚ್ಚರಿಕೆ..!

ಸೇವಾ ಸಿಂಧು ಹೆಸರಲ್ಲಿ ನಕಲಿ ಆ್ಯಪ್‌: ಎಚ್ಚರಿಕೆ..!

0

ಬೆಂಗಳೂರು: ಸೇವಾ ಸಿಂಧು ಹೆಸರಿನ ನಕಲಿ ಆ್ಯಪ್‌ಗಳ ಬಗ್ಗೆ ಎಚ್ಚರವಹಿಸಿ ಎಂದು ಬೆಸ್ಕಾಂ ಎಚ್ಚರಿಸಿದೆ.
ಸೇವಾ ಸಿಂಧು ಹೆಸರಿನಲ್ಲಿ ಯಾವುದೇ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿರುವುದಿಲ್ಲ, ನಕಲಿ ಆ್ಯಪ್‌ ಗಳನ್ನು ಡೌನ್ಲೋಡ್ ಮಾಡಿಕೊಳ್ಳದೇ ಸೇವಾ ಸಿಂಧುವಿನ ಅಧಿಕೃತ ಪೋರ್ಟಲ್‌ನ ಮೂಲಕ ನೋಂದಣಿ ಮಾಡಿಕೊಳ್ಳಿ ಎಂದು ಬೆಸ್ಕಾಂ ಸೂಚಿಸಿದೆ.
ನೋಂದಣಿ ಪ್ರಕ್ರಿಯೆ ರಾಜ್ಯದ ಎಲ್ಲ ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ನಡೆಯುತ್ತಿದೆ. ಅಲ್ಲದೇ ಗ್ರಾಹಕರು ನೇರವಾಗಿ ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಮೂಲಕ ನೋಂದಣಿ ಮಾಡಬಹುದು. ನೋಂದಣಿ ಪ್ರಕ್ರಿಯೆಗೆ ಯಾವುದೇ ಗಡುವು ಇಲ್ಲ. ಹಾಗಾಗಿ ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version