Home ನಮ್ಮ ಜಿಲ್ಲೆ ಚಿಕ್ಕಮಗಳೂರು ಸೆ.2 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ..

ಸೆ.2 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮನ..

ಮಂಗಳೂರು : ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2ರಂದು ಆಗಮಿಸಲಿದ್ದು, ಮೋದಿ ಸ್ವಾಗತಿಸಲು ಕರಾವಳಿ ಭಾಗದ ಬಿಜೆಪಿ ಕಾರ್ಯಕರ್ತರು ಫುಲ್ ಆಕ್ಟೀವ್ ಆಗಿದ್ಧಾರೆ. ಪ್ರಧಾನಿ ಕರಾವಳಿ ಭಾಗಕ್ಕೆ ಭೇಟಿ ನೀಡುತ್ತಿದ್ಧಾರೆ. ಮಂಗಳೂರಿನಲ್ಲಿ ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ಸಕಲಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬಿಜೆಪಿ ಕಾರ್ಯಕರ್ತರು ಮೋದಿ ಬರ್ತಾರೆ ಎಂದು ಗೊತ್ತಾದ ತಕ್ಷಣ ಫುಲ್ ಆಕ್ಟೀವ್ ಆಗಿದ್ದು, ಮೋದಿ ಸಮಾವೇಶಕ್ಕೆ ಜನಸಾಗರವೇ ಹರಿದು ಬರಲಿದೆ. ಮೋದಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ಧಾರೆ. ತುಳು ಭಾಷೆಯಲ್ಲಿ ಭಾಷಣ ಮಾಡಲಿದ್ಧಾರೆ. ಬಿಜೆಪಿ ಕಾರ್ಯಕರ್ತರು ಮೋದಿ ಸ್ವಾಗತಿಸಲು ಅಸಮಾಧಾನವನ್ನು ಮರೆತಿದ್ಧಾರೆ. ಇತ್ತೀಚಿಗೆ ಪ್ರವೀಣ್​ ನೆಟ್ಟಾರ್​ ಕೊಲೆಯಿಂದ ಅಸಮಾಧಾನಕ್ಕೆ ಒಳಗಾಗಿದ್ದರು. ಪ್ರವೀಣ್​ ಕುಟುಂಬವನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಸರ್ಕಾರಿ ಕಾರ್ಯಕ್ರಮದ ನಂತರ ಪ್ರವೀಣ್​ ಕುಟುಂಬವನ್ನು ಮೋದಿ ಭೇಟಿಯಾಗುವ ಸಾಧ್ಯತೆಗಳಿವೆ. ನವೀನ್ ಕುಟುಂಬಕ್ಕೆ ಸಾಂತ್ವನ ಹೇಳುವ ಮೂಲಕ ಕಾರ್ಯಕರ್ತರನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮೋದಿ ಪ್ಲಾನ್ ಆಗಿದೆ.

Exit mobile version