Home News ಸಾವಿನಲ್ಲೂ ಒಂದಾದ ದಂಪತಿ

ಸಾವಿನಲ್ಲೂ ಒಂದಾದ ದಂಪತಿ

ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತವೆ. ವಿವಾಹವಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನುಕಂಡು ಸಿಹಿ, ಕಹಿ, ನೋವು, ಕಷ್ಟಗಳ ಸವಾಲುಗಳನ್ನು ಒಟ್ಟಿಗೆ ಎದುರಿಸಿ, ಒಟ್ಟಿಗೇ ಸ್ವರ್ಗಸ್ಥರಾಗುವದೆಂದರೆ ಸುಮ್ಮನೆಯಾ? ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ ಸಾವಿನಲ್ಲೂ ಸಂಗಾತಿ ಜೊತೆಗೆ ಅನ್ನೋದು ಇದೇನಾ.ಹೌದು, ವಿವಾಹವಾಗಿ 55 ವರ್ಷಗಳ ಕಾಲ ಜತೆಯಾಗಿ ಬದುಕಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಂಗಳವಾರ ಪೇಟೆ ನಿವಾಸಿ ಭೀಮಪ್ಪ ಬಾಗಲಕೋಟ(80) ಮತ್ತು ಇವರ ಪತ್ನಿ ಕಸ್ತೂರಿ(74) ಸಾವಿನಲ್ಲೂ ಒಂದಾದ ದಂಪತಿ.ವಯೋಸಹಜ ಕಾಯಿಲೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭೀಮಪ್ಪ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗಿನ ಜಾವ 1 ಗಂಟೆಗೆ ನಿಧನ ಹೊಂದಿದ್ದರು.

ಆರೋಗ್ಯವಾಗಿಯೇ ಮನೆಯಲ್ಲಿದ್ದ ಪತ್ನಿ ಕಸ್ತೂರಿ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಹೃದಯಾಘಾತದಿಂದ ಬೆಳಗಿನ ಜಾವ 4 ಗಂಟೆಗೆ ನಿಧನರಾದರು.ಇಂದು ಅವರ ಮನೆಯಲ್ಲಿ ಕುಟುಂಬಸ್ಥರು ದಿವಂಗತ ದಂಪತಿಯನ್ನು ಜೋಡಿಯಾಗಿಯೇ ಕೂಡಿಸಿ ಅಂತ್ಯ ಕ್ರಿಯೆ ನಡೆಸಿದ್ದಾರೆ

Exit mobile version