Home ತಾಜಾ ಸುದ್ದಿ ಶ್ರೀನಗರಕ್ಕೆ ಬಂದ ಧಾರವಾಡದ ಅಮರನಾಥ ಯಾತ್ರಿಕರು

ಶ್ರೀನಗರಕ್ಕೆ ಬಂದ ಧಾರವಾಡದ ಅಮರನಾಥ ಯಾತ್ರಿಕರು

0

ಧಾರವಾಡ: ಧಾರವಾಡದಿಂದ ಅಮರನಾಥ ಯಾತ್ರೆಗೆ ತೆರಳಿದ್ದ ಐವರು ಸೋಮವಾರ ಸುರಕ್ಷಿತವಾಗಿ ಶ್ರೀನಗರಕ್ಕೆ ತಲುಪಿದ್ದಾರೆ.
ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿದ ಮಡಿವಾಳಪ್ಪ ಕೊಟಬಾಗಿ, ರವಿವಾರ ಮಳೆ ಕಡಿಮೆಯಾಗಿದ್ದರಿಂದ ಏರ್ಲಿಫ್ಟ್ ಆರಂಭಿಸಲಾಯಿತು. ಪಂಚತಣರ್ಯಿಂದ ಪೆಹೆಲ್ಗಾಮ್ಗೆ ಹೆಲಿಕ್ಯಾಪ್ಟರ್ ಸೇವೆ ಆರಂಭಿಸಿದ್ದರಿಂದ ಧಾರವಾಡದಿಂದ ಅಮರನಾಥಕ್ಕೆ ತೆರಳಿದ್ದ ರಾಕೇಶ ನಾಜರೆ, ನಾಗರಾಜ ಹಳಕಟ್ಟಿ, ಹರೀಶ ಸಾಳುಂಕೆ, ವಿಠ್ಠಲ ಬಾಚಕುಂಡೆ ನಾವು ಐದು ಜನರು ಹೆಲಿಕ್ಯಾಪ್ಟರ್ ಮೂಲಕ ಪೆಹೆಲ್ಗಾಮ್ಗೆ ಬಂದೆವು.
ಪಂಚತಣರ್ಯಲ್ಲಿದ್ದಾಗ ಪ್ರಾಣವಾಯು ಕೊರತೆಯಿಂದಾಗಿ ನನಗೆ ಮೂಗಿನಲ್ಲಿ ರಕ್ತ ಬಂದು ಸಮಸ್ಯೆಯಾಗಿತ್ತು. ಆದರೆ ಆಕ್ಸಿಜನ್ ವ್ಯವಸ್ಥೆ ಮಾಡಿದ್ದರಿಂದ ಆರೋಗ್ಯ ಸುಧಾರಿಸಿತು. ಈಗ ಶ್ರೀನಗರದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇವೆ ಎಂದು ಮಡಿವಾಳಪ್ಪ ಕೊಟಬಾಗಿ ತಿಳಿಸಿದರು.

Exit mobile version