Home ತಾಜಾ ಸುದ್ದಿ ಶೈಕ್ಷಣಿಕ ಅರ್ಹತೆಯ ಕೊರತೆಯು ದೇಶಕ್ಕೆ ಅಪಾಯಕಾರಿ: ಮನೀಶ್​ ಸಿಸೋಡಿಯಾ ಪತ್ರ ವೈರಲ್

ಶೈಕ್ಷಣಿಕ ಅರ್ಹತೆಯ ಕೊರತೆಯು ದೇಶಕ್ಕೆ ಅಪಾಯಕಾರಿ: ಮನೀಶ್​ ಸಿಸೋಡಿಯಾ ಪತ್ರ ವೈರಲ್

0

ನವದೆಹಲಿ: ದೇಶದ ಪ್ರಗತಿಗೆ ಒಬ್ಬ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ ಎಂದು ಎಎಪಿ ಮುಖಂಡ ಮನೀಶ್ ಸಿಸೋಡಿಯಾ ಬಹಿರಂಗ ಪತ್ರ ಬರೆದಿದ್ದಾರೆ. ಈ ಪತ್ರವನ್ನು ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಅದರಲ್ಲಿ ಮೋದಿಗೆ ವಿಜ್ಞಾನ ಅರ್ಥವಾಗುತ್ತಿಲ್ಲ. ಶಿಕ್ಷಣದ ಮಹತ್ವ ತಿಳಿಯುತ್ತಿಲ್ಲ. ದೇಶದಲ್ಲಿ ಕಳೆದ ಕೆಲವು ವರ್ಷಗಳಲ್ಲಿ 60,000 ಶಾಲೆಗಳನ್ನು ಮುಚ್ಚಲಾಗಿದೆ ಎಂದು ಆರೋಪಿಸಿದ್ದಾರೆ. ದೇಶದ ಪ್ರಗತಿಗೆ ಒಬ್ಬ ವಿದ್ಯಾವಂತ ಪ್ರಧಾನಿ ಇರುವುದು ಅಗತ್ಯ. ಪ್ರಧಾನಿ ಕಡಿಮೆ ವಿದ್ಯಾವಂತರಾಗಿದ್ದರೆ ಅದು ದೇಶಕ್ಕೆ ತುಂಬಾ ಅಪಾಯಕಾರಿ ಎಂದು ಸಿಸೋಡಿಯಾ ಅವರು ತಮ್ಮ ಪತ್ರಲ್ಲಿ ಉಲ್ಲೇಖಿಸಿದ್ದಾರೆ.

Exit mobile version