Home ಅಪರಾಧ ಶಾಲಾ ವಾಹನ ಹರಿದು 3 ವರ್ಷದ ಮಗು ಸಾವು

ಶಾಲಾ ವಾಹನ ಹರಿದು 3 ವರ್ಷದ ಮಗು ಸಾವು

0

ಕುಷ್ಟಗಿ: ಮೂರು ವರ್ಷದ ಮಗುವೊಂದು ಶಾಲಾ ವಾಹನದ ಚಕ್ರಕ್ಕೆ ಸಿಲುಕಿದ ಪರಿಣಾಮ ಮೃತಪಟ್ಟ ಘಟನೆ ತಾಲೂಕಿನ ಗೋತಗಿ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ಓತಗೇರಿ ಗ್ರಾಮದ ಜ್ಞಾನಭಾರತಿ ಖಾಸಿಗಿ ಶಾಲೆಗೆ ಸೇರಿದ ಶಾಲಾ ವಾಹನ ಎಂದಿನಂತೆ ಗೋತಗಿ ಗ್ರಾಮಕ್ಕೆ ಮಕ್ಕಳನ್ನು ಹತ್ತಿಸಿಕೊಂಡು ಹೋಗಲು ಬಂದ ಸಂದರ್ಭದಲ್ಲಿ ಆಟವಾಡುತ್ತಿದ್ದ ಮಗು ಏಕಾಏಕಿಯಾಗಿ ಸಂಚರಿಸುತ್ತಿದ್ದ ವಾಹನ ಮುಂಭಾಗದಲ್ಲಿ ಬಂದ ಪರಿಣಾಮ ವಾಹನ ಮುಂಭಾಗದ ಗಾಲಿಗಳು ಮಗುವಿನ ತಲೆಯ ಮೇಲೆ ಹಾದು ಹೋಗಿರುವುದರಿಂದ ಸ್ಥಳದಲ್ಲಿಯೇ ಮೂರು ವರ್ಷದ ಬಾಲಕಿ ಮೃತಪಟ್ಟಿದೆ. ಮೂರು ವರ್ಷದ ಬಾಲಕಿ ಚೈತ್ರಾ ಬಸಪ್ಪ ಬಾವಿಕಟ್ಟಿ ಮೃತಪಟ್ಟ ಬಾಲಕಿ, ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version