Home ತಾಜಾ ಸುದ್ದಿ ವಿಧಾನಸಭೆ ಅಧಿವೇಶನ ಆರಂಭ: ನೂತನ ಶಾಸಕರ ಪ್ರಮಾಣವಚನ ಸ್ವೀಕಾರ

ವಿಧಾನಸಭೆ ಅಧಿವೇಶನ ಆರಂಭ: ನೂತನ ಶಾಸಕರ ಪ್ರಮಾಣವಚನ ಸ್ವೀಕಾರ

0

ಬೆಂಗಳೂರು: ಸದನ ಆರಂಭವಾದ ಬೆನ್ನಲ್ಲೇ ನೂತವಾಗಿ ಆಯ್ಕೆಗೊಂಡು ಶಾಸಕರ ಪ್ರಮಾಣವಚನ ಸ್ವೀಕಾರ ಪ್ರಕ್ರಿಯೆ ಆರಂಭವಾಗಿದೆ. ಸದನದಿಂದ ಸಭಾಧ್ಯಕ್ಷರ ಆಯ್ಕೆ ನಡೆಯುವವರೆಗೆ ಹಿರಿಯ ಸದಸ್ಯರಾದ ಆರ್‌.ವಿ ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ನೂತನ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಮೂರು ದಿನ ನಡೆಯಲಿದೆ. ಡಾ.ಜಿ.ಪರಮೇಶ್ವರ್, ಕೆ.ಎಚ್‌​.ಮುನಿಯಪ್ಪ, ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಸತೀಶ್​ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ರಾಮಲಿಂಗಾರೆಡ್ಡಿ, ಯು.ಟಿ.ಖಾದರ ಪ್ರದೀಪ್ ಈಶ್ವರ್, ಭಾಗೀರಥಿ ಮುರುಳ್ಯ, ಬಸವರಾಜ ಶಿವಗಂಗಾ, ಜಿ.ಟಿ.ದೇವೇಗೌಡ  ಪ್ರಮಾಣವಚನ ಸ್ವೀಕರಿಸಿದರು.ಶಾಂತಿನಗರ ಕ್ಷೇತ್ರದ ಶಾಸಕರಾಗಿ ಎನ್.ಎ.ಹ್ಯಾರಿಸ್,  ಗಂಗಾವತಿ ಕ್ಷೇತ್ರದ ಶಾಸಕರಾಗಿ ಗಾಲಿ ಜನಾರ್ದನರೆಡ್ಡಿ, ತುಮಕೂರು ನಗರ ಕ್ಷೇತ್ರದ ಶಾಸಕರಾಗಿ ಜ್ಯೋತಿ ಗಣೇಶ್​,  ಉತ್ತರ ಕ್ಷೇತ್ರದ ಶಾಸಕಿಯಾಗಿ ಖನೀಜ್ ಫಾತಿಮಾ,  ಕುಂದಾಪುರ ಕ್ಷೇತ್ರದ ಶಾಸಕರಾಗಿ ಎ.ಕಿರಣ್ ಕುಮಾರ್ ಕೊಡಗಿ, ಕೋಲಾರ ಕ್ಷೇತ್ರದ ಶಾಸಕರಾಗಿ ಕೊತ್ತೂರು ಜಿ.ಮಂಜುನಾಥ, ಕೊಳ್ಳೇಗಾಲ ಕ್ಷೇತ್ರದ ಶಾಸಕರಾಗಿ ಎ.ಆರ್.ಕೃಷ್ಣಮೂರ್ತಿ,  ವಿಜಯನಗರ ಕ್ಷೇತ್ರದ ಶಾಸಕರಾಗಿ ಎಂ.ಕೃಷ್ಣಪ್ಪ, ತುರುವೇಕೆರೆ ಕ್ಷೇತ್ರದ ಶಾಸಕರಾಗಿ ಎಂ.ಟಿ.ಕೃಷ್ಣಪ್ಪ ಮತ್ತು ಹೂವಿನಹಡಗಲಿ ಕ್ಷೇತ್ರದ ಶಾಸಕರಾಗಿ ಕೃಷ್ಣಾ ನಾಯ್ಕ್​ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರಿದ್ದಾರೆ. ಆದರೆ ಪ್ರಮಾಣ ವಚನಕ್ಕೆ ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಜಮೀರ್ ಅಹಮದ್ ಖಾನ್ ಗೈರಾಗಿದ್ದಾರೆ. ವಿಜಯಪುರ ಕ್ಷೇತ್ರದ ಶಾಸಕರಾಗಿ ಬಸನಗೌಡ ಪಾಟೀಲ್ ಹಾಗೂ ಶಿಗ್ಗಾಂವಿ ಕ್ಷೇತ್ರದ ಶಾಸಕರಾಗಿ ಬಸವರಾಜ ಬೊಮ್ಮಾಯಿ ಸಹ ಪ್ರಮಾಣವಚನ ಸ್ವೀಕರಿಸಿದರು. ಸಭಾಪತಿಗಳ ಅನುಪಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ನಿಯಮ 9ರ ಅಡಿ ಸಿ.ಎಸ್. ನಾಡಗೌಡ, ಶಿವಾನಂದ ಪಾಟೀಲ್, ಅರವಿಂದ ಬೆಲ್ಲದ್, ಯು.ಟಿ. ಖಾದರ್, ಬೈರತಿ ಬಸವರಾಜ ಮತ್ತು ಸಿ.ಎನ್. ಬಾಲಕೃಷ್ಣ ಅವರ ಹೆಸರುಗಳನ್ನು ನಾಮಕರಣ ಮಾಡಲಾಗಿದೆ.

Exit mobile version