ಶ್ರೀರಂಗಪಟ್ಟಣ: ವಿದ್ಯಾರ್ಥಿಗಳಿಂದ ಅಲ್ಲಾಪಟ್ಟಣ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ಮಾಡಿದ ಘಟನೆ ನಡೆದಿದೆ, ಶ್ರೀರಂಗಪಟ್ಟಣ ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಸಾರಿಗೆ ಇಲಾಖೆ ಹಾಗೂ ಸರ್ಕಾರದ ವಿರುದ್ದ ವಿದ್ಯಾರ್ಥಿಗಳು ಆಕ್ರೋಷ ವ್ಯಕ್ತಪಡಿಸಿದ್ದು, ಬಸ್‌ನಲ್ಲಿ ನಿಂತುಕೊಳ್ಳಲೂ ಜಾಗವಿಲ್ಲದ ಕಾರಣ ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ ಮಾಡಿದ್ದಾರೆ. ಒಂದು ದಿನವಲ್ಲ, ಎರಡು ದಿನವಲ್ಲ ಪ್ರತೀ ದಿನವೂ ಇದೇ ಪರಿಸ್ಥಿತಿಯಾಗಿದೆ, ನಾವು ಶಾಲಾ- ಕಾಲೇಜಿಗೆ ಹೇಗೆ ಹೋಗ ಬೇಕೆಂದು ಬೇಸರ ವ್ಯಕ್ತಪಡಿಸಿದ್ದಾರೆ, ಇದು ಕೇವಲ ವಿದ್ಯಾರ್ಥಿಗಳ ಗೊಳಲ್ಲ ಗಾರ್ಮೆಂಟ್ಸ್‌ಗೆ ಉದ್ಯೋಗಕ್ಕೆ ತೆರಳುವ ಮಹಿಳೆಯರು ಸಹ ಈ ಸರಕಾರಿ ಬಸ್ಸನ್ನೇ ಅವಲಂಬಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ, ಅಲ್ಲಾಪಟ್ಟಣ ಗ್ರಾಮಕ್ಕೆ ಬರುವ ಮುನ್ನವೇ ಬಸ್ ಭರ್ತಿಯಾಗುತ್ತಿದ್ದು, ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೆ ತೆರಳುತ್ತಿದ್ದ ಬಸ್ ತಡೆದು ಈ ಪ್ರತಿಭಟನೆ ನಡೆದಿದೆ.
