Home ತಾಜಾ ಸುದ್ದಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಪುರಸಭೆ ಪ್ರಬಾರ ಅಧಿಕಾರಿ

ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದ ಪುರಸಭೆ ಪ್ರಬಾರ ಅಧಿಕಾರಿ

0

ಶ್ರೀರಂಗಪಟ್ಟಣ: ಬಿಲ್ ಪಾವತಿ ವಿಷಯಕ್ಕೆ ಸಂಬಂಧಿಸಿದಂತೆ 40 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಪಟ್ಟಣ ಪುರಸಭೆ ಪ್ರಭಾರ ಸಮುದಾಯ ಸಂಬಂಧ ಅಧಿಕಾರಿ (ಕಮ್ಯನಿಟಿ ಅಫೇರ್ ಆಫೀಸರ್) ಆರ್.ನಾಗೇಂದ್ರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾನೆ. ಆರ್.ನಾಗೇಂದ್ರ ಮಳವಳ್ಳಿ ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ, ಲಿಂಬಾ ಮೋಟಾರ್ಸ್ ಸಂಸ್ಥೆ ವತಿಯಿಂದ ವಿಶೇಷ ಚೇತನರಿಗೆ 15 ತ್ರಿಚಕ್ರ ವಾಹನಗಳನ್ನು ವಿತರಿಸಲಾಗಿತ್ತು.
ಅದರ ಬಿಲ್ ಪಾಸ್ ಮಾಡುವ ಸಲುವಾಗಿ ನಾಗೇಂದ್ರ ಶೇ.15 ಪರ್ಸೆಂಟ್ ಕಮಿಷನ್ ಒಳಗೊಂಡ ಒಟ್ಟು 1,20,000 ರೂ.ಗಳಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಸಂಬಂಧ ಮಂಗಳವಾರ ಶ್ರೀರಂಗಪಟ್ಟಣದಲ್ಲಿ ಮುಂಗಡವಾಗಿ 40,000 ರೂ.ಗಳನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ‌ ಹಿಡಿದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

https://samyuktakarnataka.in/%e0%b2%ae%e0%b2%be%e0%b2%9c%e0%b2%bf-%e0%b2%b9%e0%b2%a3%e0%b2%95%e0%b2%be%e0%b2%b8%e0%b3%81-%e0%b2%b8%e0%b2%9a%e0%b2%bf%e0%b2%b5%e0%b2%a8-%e0%b2%b5%e0%b2%bf%e0%b2%b0%e0%b3%81%e0%b2%a6%e0%b3%8d/

Exit mobile version