Home ತಾಜಾ ಸುದ್ದಿ ರಕ್ತ ಚಂದನ ೨೮ ಕೋಟಿಗೆ ಬಿಡ್

ರಕ್ತ ಚಂದನ ೨೮ ಕೋಟಿಗೆ ಬಿಡ್

0

ಮಂಗಳೂರು: ಮಂಗಳೂರು ಪಣಂಬೂರು ಬಂದರಿನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಆನ್‌ಲೈನ್‌ನಲ್ಲಿ ಮೂರು ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ ೨೮ ಕೋಟಿ ರೂ.ಗೆ ಬಿಡ್ ನಲ್ಲಿ ಖರೀದಿಸಿದೆ.
೨೦೦೮ರಿಂದ ೨೦೨೩ರವರೆಗೆ ೪ ಪ್ರಕರಣಗಳಲ್ಲಿ ಮಂಗಳೂರಿನ ಕಸ್ಟಮ್ಸ್ ವಶಪಡಿಸಿಕೊಂಡಿದ್ದರು. ಇದರಲ್ಲಿ ಸುಮಾರು ೫೬.೨ ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿತ್ತು. ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದ ರಕ್ತಚಂದನ ಇದಾಗಿದ್ದು, ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆ ಆನ್‌ಲೈನ್ ಮೂಲಕ ಹರಾಜು ಹಾಕಿದೆ.
ಒಟ್ಟು ೨,೦೯೪ ದಿಮ್ಮಿಗಳನ್ನು ಒಳಗೊಂಡ ೫೬.೨ ಮೆಟ್ರಿಕ್ ಟನ್ ರಕ್ತಚಂದನ ಹರಾಜಿನಲ್ಲಿ ಖರೀದಿಯಾಗಿದೆ. ಎ ಕೆಟಗರಿ ೩ ಲಾಟ್, ಬಿ ಕೆಟಗರಿ ೬ ಲಾಟ್, ಸಿ ಕೆಟಗರಿ ೬ ಲಾಟ್, ಡಿ ಕೆಟಗರಿ ೩ ಲಾಟ್‌ಗಳಾಗಿ ವಿಂಗಡಣೆ ಮಾಡಲಾಗಿದ್ದು, ಒಟ್ಟು ೧೮ ಲಾಟ್‌ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿ ೧೦ ಲಾಟ್‌ಗೆ ೧೪.೫ ಕೋಟಿ ರೂ. ಬಿಡ್ ಹಾಗೂ ಯಮಾ ರಿಬನ್ಸ್ ಏಜೆನ್ಸಿ ಲಾಟ್‌ಗೆ ೪.೨ಕೋಟಿ ರೂ. ಬಿಡ್ ಜೊತೆಗೆ ಅಕ್ಷಾ ೩ ಲಾಟ್ ಗೆ ೧.೬ ಕೋಟಿ ರೂಎಗೆ ಬಿಡ್ ಗೆ ಖರೀದಿ ಮಾಡಿದೆ.
ಮೂರು ಬಿಡ್‌ಗಳ ಒಟ್ಟು ಮೊತ್ತ ತೆರಿಗೆ ಸೇರಿ ೨೮ ಕೋಟಿ ರೂ. ಆಗಿದೆ. ಚೀನಾ, ದುಬೈ, ಜಪಾನ್ ಸೇರಿದಂತೆ ಇತರ ದೇಶಗಳಲ್ಲಿ ರಕ್ತಚಂದನಕ್ಕೆ ಬೇಡಿಕೆಯಿದ್ದು, ಖರೀದಿ ಮಾಡಿದ ಕಂಪೆನಿ ಅಲ್ಲಿಗೆ ಸಾಗಾಟ ಮಾಡಲಿದೆ.
೨೦೧೪ ಆ.೨೧ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ೧೬.೯೯ ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ೨೦೨೦ರ ಜ.೧೦ರಂದು ಥಾಯ್ಲೆಂಡ್‌ಗೆ ಸಾಗಿಸಲು ಯತ್ನಿಸುತ್ತಿದ್ದ ೨.೨೦ ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು. ೨೦೨೨ರ ಜೂ.೩ರಂದು ಆಂಧ್ರಪ್ರದೇಶದ ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ ೪.೧೪ ಕೋಟಿ ರೂ. ಮೌಲ್ಯದ ರಕ್ತಚಂದನ ವಶಕ್ಕೆ ಪಡೆಯಲಾಗಿತ್ತು.

Exit mobile version