Home ತಾಜಾ ಸುದ್ದಿ ಮಾಜಿ ಮುಖ್ಯಮಂತ್ರಿ ಬಿಜೆಪಿಗೆ ಸೇರ್ಪಡೆ

ಮಾಜಿ ಮುಖ್ಯಮಂತ್ರಿ ಬಿಜೆಪಿಗೆ ಸೇರ್ಪಡೆ

0

ನವದೆಹಲಿ: ಆಂಧ್ರದ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಶುಕ್ರವಾರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ, ನಾಲ್ಕು ಬಾರಿ ಶಾಸಕರಾಗಿರುವ ಅವರು ಕಾಂಗ್ರೆಸ್ ತೊರೆಯಬೇಕೆಂದು ನಾನು ಎಂದಿಗೂ ಊಹಿಸಿರಲಿಲ್ಲ. ಪಕ್ಷದ ನಾಯಕತ್ವದ ತಪ್ಪು ನಿರ್ಧಾರಗಳಿಂದ ಈ ರೀತಿ ಮಾಡಿರುವುದಾಗಿ ನವದೆಹಲಿಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಹೇಳಿದ್ದಾರೆ.
“ಕಾಂಗ್ರೆಸ್ ಹೈಕಮಾಂಡ್‌ನ ಕೆಟ್ಟ ನಿರ್ಧಾರಗಳಿಂದ ಎಲ್ಲಾ ರಾಜ್ಯಗಳು ತೊಂದರೆ ಅನುಭವಿಸುತ್ತಿವೆ. ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್‌ ಪಕ್ಷ ಹಾಳಾಗುತ್ತಿದೆ. ನಾಯಕರು ಜನರ ಜತೆ ಚರ್ಚಿಸುತ್ತಿಲ್ಲ. ನಾಯಕರ ಅಭಿಪ್ರಾಯಗಳನ್ನು ಪರಿಗಣಿಸುತ್ತಿಲ್ಲ. ಇದು ಒಂದು ರಾಜ್ಯದ ಕತೆಯಲ್ಲ. ಎಲ್ಲಾ ರಾಜ್ಯಗಳಲ್ಲಿಯೂ ಇದೇ ಕತೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Kiran Kumar Reddy

Exit mobile version