ನವದೆಹಲಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ನೀರು ಹಂಚಿಕೆ ವಿವಾದ ಪರಿಹರಿಸಲು ಸ್ಥಾಪಿಸಲಾದ ಮಹದಾಯಿ ಜಲ ವಿವಾದಗಳ ನ್ಯಾಯಮಂಡಳಿ ತನ್ನ ವರದಿ ಮತ್ತು ನಿರ್ಧಾರವನ್ನು ಸಲ್ಲಿಸಲು ಮತ್ತೊಂದು ವರ್ಷ ಅವಧಿ ವಿಸ್ತರಣೆ ಮಾಡಿದೆ.
ಈ ಕುರಿತು ಗೆಜೆಟ್ ಅಧಿಸೂಚನೆಯಲ್ಲಿ ತಿಳಿಸಿದ್ದು, 20 ಆಗಸ್ಟ್, 2023 ರಿಂದ ಜಾರಿಗೆ ಬರುವಂತೆ ಈ ಟ್ರಿಬ್ಯೂನಲ್ ಮುಂದಿನ ವರದಿಯನ್ನು ಸಲ್ಲಿಸುವ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿದೆ.
ಈಗಾಗಲೇ ನ್ಯಾಯಮಂಡಳಿಯು ಅಂತಿಮ ವರದಿ ಸಲ್ಲಿಸಿದ್ದರೂ, ವರದಿಯಲ್ಲಿ ಮಾರ್ಪಾಡು ಕೋರಿ ಕರ್ನಾಟಕ ಮತ್ತು ಗೋವಾ ಎರಡೂ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದೆ.