Home ನಮ್ಮ ಜಿಲ್ಲೆ ಕೊಪ್ಪಳ ಮನೆ ಕುಸಿದು: ಮಹಿಳೆ ಸಾವು

ಮನೆ ಕುಸಿದು: ಮಹಿಳೆ ಸಾವು

0

ಕೊಪ್ಪಳ: ಮನೆ ಕುಸಿದು ಓರ್ವ ಮಹಿಳೆ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ತಾಲೂಕಿನ ಮತ್ತೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಮೃತಳನ್ನು ಬಸಮ್ಮ ಶಿವನಗೌಡ್ರು(58) ಎಂದು ಗುರುತಿಸಲಾಗಿದೆ. ಅಲ್ಲದೇ ಶಿವನಗೌಡ ಶಿವನಗೌಡ್ರು(60) ಮತ್ತು ಶಂಕ್ರಮ್ಮ ಶಿವನಗೌಡ್ರು(55) ಗಾಂಯಗೊಂಡಿದ್ದು, ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹಳೆಯ ಮಣ್ಣಿನ ಮನೆಯಲ್ಲಿಯೇ ಮೂವರು ಜೀವನ ಸಾಗಿಸುತ್ತಿದ್ದರು. ಈಚೆಗೆ ಸುರಿದ ಮಳೆಯಿಂದಾಗಿ ಮನೆ ತೇವಗೊಂಡಿತ್ತು. ಬುಧವಾರ ಮುಂಜಾನೆ ಮನೆ ಏಕಾಏಕಿ ಕುಸಿದು ದುರ್ಘಟನೆ ಸಂಭವಿಸಿದ್ದು, ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾಳೆ. ಅಲ್ಲದೇ ಇಬ್ಬರು ಮನೆಯ ಅವಶೇಷಗಳಲ್ಲಿ ಸಿಲುಕಿದ್ದರು. ಇವರನ್ನು ಹೊರಗೆ ತಂದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಕುರಿತು ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version