ಚಿಕ್ಕೋಡಿ: ತಾಲೂಕಿನ ಕೆರೂರ ಕ್ರಾಸ್ ಬಳಿ ಬೈಕ್ ಮತ್ತು 407 ಟೆಂಪೋ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿ ಮೂವರು ಯುವಕರು ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ. ಕೇರೂರ ಗ್ರಾಮದ ಪ್ರಶಾಂತ ಖೋತ (22), ಸತೀಶ ಹಿರೇಕೊಡಿ(23), ಯಲಗೌಡ ಪಾಟೀಲ (22) ಮೃತರು.
ಯುವಕರು ಬೈಕ್ ನಲ್ಲಿ ಚಿಕ್ಕೋಡಿ ಕಡೆಯಿಂದ ಕೇರೂರ ಗ್ರಾಮಕ್ಕೆ ತೆರಳುವಾಗ ಟೆಂಪೋ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ತಲೆಗೆ ಗಂಭೀರ ಗಾಯಗಳಾದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.