Home ನಮ್ಮ ಜಿಲ್ಲೆ ಉತ್ತರ ಕನ್ನಡ ಬಿ ರಿಪೋರ್ಟ್ ಸಲ್ಲಿಸಿದ್ದಕ್ಕೆ ಕಮಲಾಕರ ಮೇಸ್ತ ಅಸಮಾಧಾನ

ಬಿ ರಿಪೋರ್ಟ್ ಸಲ್ಲಿಸಿದ್ದಕ್ಕೆ ಕಮಲಾಕರ ಮೇಸ್ತ ಅಸಮಾಧಾನ

0

ಹೊನ್ನಾವರ: ಸಿಬಿಐ ತನಿಖಾ ತಂಡವು ಮೀನುಗಾರ ಬಾಲಕ ಪರೇಶ ಮೇಸ್ತನ ಸಾವಿನ ಕುರಿತು ಬಿ ವರದಿಯನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಆತನ ತಂದೆ ಕಮಲಾಕರ ಮೇಸ್ತ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಾವಿನ ತನಿಖೆಯ ಕುರಿತು ನನಗೆ ಅನುಮಾನಗಳಿವೆ. ತನಿಖೆಯಲ್ಲಿ ಶನಿ ದೇವಸ್ಥಾನ ಮತ್ತು ಹತ್ತಿರದಲ್ಲಿದ್ದ ಬಂಗಾರದ ಅಂಗಡಿಯ ಸಿಸಿಟಿವಿ ಪಡೆದಿದ್ದಲ್ಲಿ ತನಿಖೆ ಸ್ಪಷ್ಟವಾಗಿ ನಡೆಯುತ್ತಿತ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ ಪರೇಶ ಸಾವಿನಿಂದ ಬಿಜೆಪಿಗೆ ಸಹಾಯವಾಗಿದೆ. ಪಕ್ಷಗಳು ಜನರ ನೋವಿಗೆ ಸ್ಪಂದಿಸಬೇಕು. ನನ್ನ ನೋವು ಹಾಗೆಯೇ ಉಳಿದಿದೆ. ಸಾವಿನ ಕಾರಣ ಸ್ಪಷ್ಟವಾಗಬೇಕಾಗಿದೆ. ನನ್ನ ಕುಟುಂಬದವರೊಂದಿಗೆ ಮುಂದಿನ ಕಾನೂನು ಕ್ರಮದ ಕುರಿತು ಚರ್ಚಿಸಿ ನಿರ್ಣಯಿಸುತ್ತೇನೆ ಎಂದಿದ್ದಾರೆ.

Exit mobile version