Home ತಾಜಾ ಸುದ್ದಿ ಬಿಸಿ ಗಾಳಿ; ಆರೋಗ್ಯ ನಿಗಾಕ್ಕೆ ಸೂಚನೆ

ಬಿಸಿ ಗಾಳಿ; ಆರೋಗ್ಯ ನಿಗಾಕ್ಕೆ ಸೂಚನೆ

0
ಬಿಸಿ ಗಾಳಿ

ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಸಹಿತ ಕರಾವಳಿ ಕರ್ನಾಟಕದಲ್ಲಿ ಮುಂದಿನ ೪೮ ಗಂಟೆಗಳಲ್ಲಿ ಬಲವಾದ ಬಿಸಿ ಗಾಳಿ ಬೀಸುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಈ ಅವಧಿಯಲ್ಲಿ ತಾಪಮಾನ ೪೦ ಡಿಗ್ರಿ ಸೆಲ್ಸಿಯಸ್ ಮೀರುವ ಸಾಧ್ಯತೆಗಳಿದ್ದು, ಜನರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ವಿಶೇಷ ನಿಗಾ ವಹಿಸಲು ಸೂಚನೆ ನೀಡಲಾಗಿದೆ.
ಮುಂದಿನ ೪೮ ಗಂಟೆಗಳಲ್ಲಿ ಕರ್ನಾಟಕ ಕರಾವಳಿಯ ಕೆಲವು ಕಡೆಗಳಲ್ಲಿ ಬಿಸಿಗಾಳಿಯ ವಾತಾವರಣ ಕಂಡು ಬರಲಿದೆ. ಹಾಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ಎಂದು ಹವಾಮಾನ ಇಲಾಖೆಯು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ತೀವ್ರ ಬಿಸಿಲಿನ ವಾತಾವರಣವಿದೆ. ಬಲವಾದ ಗಾಳಿಯೂ ಬೀಸುತ್ತಿದೆ. ಇದರಿಂದ ತಾಪಮಾನದಲ್ಲಿ ಏರಿಕೆಯೂ ಆಗಿದೆ. ತಾಪಮಾನದಲ್ಲಿ ನಿರಂತರ ಏರಿಕೆಯ ಪರಿಣಾಮ ಬಿಸಿಗಾಳಿ ಸೃಷ್ಟಿಯಾಗಲಿದೆ. ಹಾಗಾಗಿ ಹೀಟ್‌ಸ್ಟ್ರೋಕ್, ಕಣ್ಣಿನ ಉರಿ, ತಲೆಸುತ್ತು ಸಹಿತ ನಾನಾ ಆರೋಗ್ಯ ಸಮಸ್ಯೆಗಳು ತಲೆದೋರುವ ಅಪಾಯವಿದೆ ಎಂದು ತಿಳಿಸಿದೆ.

Exit mobile version