Home ತಾಜಾ ಸುದ್ದಿ ಇಂದು ರಾತ್ರಿ ಬಿಜೆಪಿ ಮೊದಲ ಪಟ್ಟಿ‌…

ಇಂದು ರಾತ್ರಿ ಬಿಜೆಪಿ ಮೊದಲ ಪಟ್ಟಿ‌…

0

ಹುಬ್ಬಳ್ಳಿ: ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಇಂದು ರಾತ್ರಿಯೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿಯೂ ನಾನು ಸ್ಪರ್ಧಿಸುತ್ತೇನೆ. ಮೊದಲನೇ ಪಟ್ಟಿಯಲ್ಲಿಯೇ ನನ್ನಗೂ ಟಿಕೆಟ್ ಕೊಡುವ ವಿಶ್ವಾಸವಿದೆ ಎಂದು ಹೇಳಿದರು.
ಕೆಲ ಹಾಲಿ ಶಾಸಕರಿಗೆ ಆರೋಗ್ಯ ಸಮಸ್ಯೆ ಇದೆ. ಇನ್ನೂ ಕೆಲ ಶಾಸಕರಿಗೆ ವಿರೋಧ ಅಲೆಯೂ ಇದೆ. ಹೀಗಾಗಿ, ಎಲ್ಲವನ್ನೂ ಹೈಕಮಾಂಡ್ ಅವಲೋಕನ ಮಾಡುತ್ತಿದೆ. ಯಾವ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಬೇಕು ಅಥವಾ ಬೇಡ ಎಂಬುದನ್ನು ನಮ್ಮ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ ಎಂದು ಹೇಳಿದರು.

Exit mobile version