Home ನಮ್ಮ ಜಿಲ್ಲೆ ಕೊಪ್ಪಳ ಬಳ್ಳಾರಿ ನಗರದಿಂದ ಪತ್ನಿ ಸ್ಪರ್ಧೆ: ಜನಾರ್ದನ ರೆಡ್ಡಿ

ಬಳ್ಳಾರಿ ನಗರದಿಂದ ಪತ್ನಿ ಸ್ಪರ್ಧೆ: ಜನಾರ್ದನ ರೆಡ್ಡಿ

0
janardhana reddy

ಕೊಪ್ಪಳ(ಗಂಗಾವತಿ): ಮಾಜಿ ಸಚಿವ ಜನಾರ್ದನ ರೆಡ್ಡಿ ಇಂದು ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಲ್ಯಾಣ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಪತ್ನಿ ಅರುಣಾಲಕ್ಷ್ಮೀ ಸ್ಪರ್ಧೆ ಮಾಡುವುದು ಖಚಿತ ಎಂದಿದ್ದಾರೆ. ಪಕ್ಷ ಸ್ಥಾಪಿಸಿ ಕೇವಲ 30 ದಿನವಾಗಿದ್ದು, ಇಷ್ಟರಲ್ಲಿಯೇ ಕೆಆರ್​ಪಿಪಿ ಇಡೀ ರಾಜ್ಯದ ನಾಯಕರ ನಿದ್ದೆ ಗೆಡಿಸಿದೆ. ಪಕ್ಷದ ಪ್ರಣಾಳಿಕೆಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಪ್ರಣಾಳಿಕೆಯಲ್ಲಿನ ಪ್ರತಿಯೊಂದು ಅಂಶವನ್ನು ಈಡೇರಿಸುವುದಾಗಿ ಲಿಖಿತ ಪೂರ್ವಕ ಬರೆದುಕೊಡುತ್ತೇನೆ. ಜನ ಅಭಿವೃದ್ಧಿಯ ವಿಚಾರದಲ್ಲಿ ಏನನ್ನು ನಿರೀಕ್ಷೆ ಮಾಡುತ್ತಿದ್ದಾರೋ ಅದನ್ನು ಮೀರಿ ನಾನು ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದರು.

Exit mobile version