Home ತಾಜಾ ಸುದ್ದಿ ಬಳ್ಳಾರಿಯಲ್ಲಿ ಡಿಕೆಶಿಗೆ ಸೇಬಿನ ಹಾರ, ಸೇಬಿಗಾಗಿ ಮುಗಿಬಿದ್ದ ಜನರು

ಬಳ್ಳಾರಿಯಲ್ಲಿ ಡಿಕೆಶಿಗೆ ಸೇಬಿನ ಹಾರ, ಸೇಬಿಗಾಗಿ ಮುಗಿಬಿದ್ದ ಜನರು

ಬಳ್ಳಾರಿ; ಡಿಕೆಶಿಗೆ ಸೇಬಿನ ಹಾರ, ಸೇಬಿಗಾಗಿ ಮುಗಿಬಿದ್ದ ಜನರು ಬಳ್ಳಾರಿ ಪ್ರತಿನಿಧಿ ಪಕ್ಷದಿಂದ ಭಾರತ್ ಜೋಡೊ ಯಾತ್ರೆಯನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಬಳ್ಳಾರಿಯಲ್ಲಿ ಪೂರ್ವಭಾವಿ ಸಭೆ ಹಾಗೂ ಸ್ಥಳ ಪರಿಶೀಲನೆಗೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಗರಕ್ಕೆ ಆಗಮಿಸಿದ್ದಾರೆ. ಅದ್ಧೂರಿಯಾಗಿ ಅವರನ್ನು ಸ್ವಾಗತಿಸಿದ್ದು, ಸೇಬು ಹಣ್ಣಿನ ಹಾರವನ್ನು ಸಿದ್ಧಪಡಿಸಲಾಗಿತ್ತು. ನಗರದ ಸುಧಾ ಕ್ರಾಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ಗೆ ಬೃಹತ್‌ ಸೇಬಿನ ಹಾರ ಹಾಕಿ ಸ್ವಾಗತಿಸಲಾಯಿತು. ಅಭಿಮಾನಿಗಳು ಕ್ರೇನ್ ಬಳಸಿ ಸೇಬಿನ ಹಾರ ಹಾಕಿದ್ದು, ಅವರನ್ನು ಭರ್ಜರಿಯಾಗಿ ಸ್ವಾಗತಿಸಿದರು.

Exit mobile version