Home ತಾಜಾ ಸುದ್ದಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎಸ್.ಐ.ಚಿಕ್ಕನಗೌಡರ

ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಎಸ್.ಐ.ಚಿಕ್ಕನಗೌಡರ

0

ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ ಟಿಕೆಟ್ ವಂಚಿತರಾದ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬೆನ್ನಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ಕುಂದಗೋಳ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಕುಂದಗೋಳ ಕ್ಷೇತ್ರದ ಬಿಜೆಪಿ ಟಿಕೆಟ್ ಗೆ ಭಾರಿ ಪೈಪೋಟಿ ನಡೆಸಿದ್ದರು. ಆದರೆ, ಬಿಜೆಪಿ ಎಂ.ಆರ್ .ಪಾಟೀಲರಿಗೆ ನೀಡಿತ್ತು. ಬಳಿಕ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದ ಚಿಕ್ಕನಗೌಡರ ಕುಂದಗೋಳ ಕ್ಷೇತ್ರಕ್ಜೆ ತಮಗೆ ಟಿಕೆಟ್ ಕೇಳಿದ್ದರು. ಆದರೆ, ಕೈ ನಾಯಕರೂ ಯಾವುದೇ ಸಿಗ್ನಲ್ ನೀಡಿರಲಿಲ್ಲ. ಮೊದಲೇ ಘೋಷಿದಂತೆ ಪಕ್ಷದ ಟಿಕೆಟ್ ಸಿಗಲಿ ಬಿಡಲಿ ನಾನು ಸ್ಪರ್ಧೆ ಮಾಡುತ್ತೇನೆ ಎಂಬ ಮಾತಿನಿಂತೆ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ

Exit mobile version