Home ನಮ್ಮ ಜಿಲ್ಲೆ ಕೊಪ್ಪಳ ನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ

ನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ

0

ಕೊಪ್ಪಳ: ಒಮ್ಮೊಮ್ಮೆ ಮಂತ್ರಿಯಾಗಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹಣೆಬರಹ ಬೇಕು ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಕುಕನೂರಿನಲ್ಲಿ ಜನಸಂರ್ಪಕ ಸಭೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ. ಅವರಪ್ಪಂದಿರ ಜೊತೆ ನಾನು ಕೆಲಸ‌ ಮಾಡಿದವನು. ಇವರು ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆ ಎಂದರು.
ಸಿದ್ದರಾಮಯ್ಯ ಕಾಂಗ್ರೆಸ್​​ಗೆ ಬಂದು ಎರಡು ಬಾರಿ ಮುಖ್ಯಮಂತ್ರಿ ಆದರು. ಮೂಲ ಕಾಂಗ್ರೆಸ್ಸಿಗರು ಏನು ಹೇಳುತ್ತಿರಬಹುದು? ಇವೆಲ್ಲಾ ಮನುಷ್ಯನ ಅದೃಷ್ಟ. ದೇವೆಗೌಡರ ಕ್ಯಾಬಿನೆಟ್​​​ನಲ್ಲಿ ನಾನು ಮಿನಿಸ್ಟರ್‌ ಆಗಿದ್ದೆ. ಕುಮಾರಸ್ವಾಮಿ ನನ್ನ ಪಕ್ಕದಲ್ಲೂ ನಿಲ್ಲುತ್ತಿರಲಿಲ್ಲ. ಎಲ್‌.ಕೆ. ಅಡ್ವಾಣಿ ಬಿಜೆಪಿ ಕಟ್ಟಿಕಟ್ಟಿ ಹೈರಾಣಾದ್ರು. ಮೋದಿ ಬಂದು ಪಿಎಂ ಆದರು ಇದು ಅವರ ಅದೃಷ್ಟ ಎಂದರು.

Exit mobile version