Home ತಾಜಾ ಸುದ್ದಿ ಧ್ವನಿ ಎತ್ತುವವರ ವಿರುದ್ಧ ಧಮನ ಮಾಡುವ ಕೆಲಸ ನಡೆದಿದೆ

ಧ್ವನಿ ಎತ್ತುವವರ ವಿರುದ್ಧ ಧಮನ ಮಾಡುವ ಕೆಲಸ ನಡೆದಿದೆ

0

ಹುಬ್ಬಳ್ಳಿ: ಮುಂಗಾರು ಜೂನ್ ತಿಂಗಳ ಕೊನೆವರೆಗೂ ಬರಲಿಲ್ಲ. ಇದರಿಂದ ರೈತರಿಗೆ ಸಾಕಷ್ಟು ನಷ್ಟ ಆಗಿದೆ.‌ ಆಗಸ್ಟ್‌ನಲ್ಲಿ ಮಳೆ ಮತ್ತೆ ಹೋಗಿದೆ. ಕೂಡಲೇ ಬರಗಾಲ ಘೋಷಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಮೂರು ತಿಂಗಳಿಂದ ಬರಗಾಲ ಘೋಷಣೆ ಮಾಡಿಲ್ಲ, ಬೆಳೆ, ಕುಡಿಯುವ ನೀರಿನ ಬಗ್ಗೆ ಯೋಚನೆ ಮಾಡಿಲ್ಲ ಎಂದರು.
ಕುಡಿಯುವ ನೀರು, ಬೆಳೆ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕು. ಮುಂದಿನ ದಿನಗಳಲ್ಲಿ ತೀವ್ರ ಕ್ಷಾಮ ನೋಡಬೇಕಾಗುತ್ತದೆ.‌. ನೀರಿನ ಕಡಿಮೆ ಪ್ರಮಾಣದಿಂದ ವಿದ್ಯುತ್ ಉತ್ಪಾದನೆ ಕಡಿಮೆ ಆಗಿದೆ. ತೀವ್ರವಾಗಿ ವಿದ್ಯುತ್ ಕಟ್ ಮಾಡಲಾಗುತ್ತಿದೆ. ಅದು ರೈತರಿಗೆ ಗೊತ್ತು, ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರ್ಗಾವಣೆ ದಂದೆ ಸೇರಿದಂತೆ ತಮ್ಮ ಹಿತಕ್ಕಾಗಿ ಬಡಿದಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ವಿರುದ್ಧ ಧಮನ ಮಾಡುವ ಕೆಲಸ ನಡೆದಿದೆ. ಎಂ.ಎಲ್.ಎ ಗಳ ಪತ್ರ ಪ್ರಕಟ ಮಾಡಿದ ಪತ್ರಕರ್ತರಗೆ ನೋಟಿಸ್ ಕೊಡ್ತಾರೆ. ಪತ್ರಿಕಾ ಸ್ವಾತಂತ್ರ್ಯ ಧಮನ ಮಾಡುವ ಕೆಲಸ ಮಾಡ್ತಾ ಇದ್ದಾರೆ. ಕಾಂಗ್ರೆಸ್ ಗೆ ಭಯ ಹುಟ್ಟಿಕೊಂಡಿದೆ ಎಂದರು. ಆಪರೇಷನ್ ಹಸ್ತ ಮಾಡ್ತಾ ಇದ್ದಾರೆ. ಆದರೆ ಅವು ಯಾವು ಯಶಸ್ವಿ ಆಗಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Exit mobile version