Home ತಾಜಾ ಸುದ್ದಿ ತೇರದಾಳ ಕ್ಷೇತ್ರ: ಬಿಜೆಪಿ-ಕಾಂಗ್ರೆಸ್‌ ಎರಡೂ ಪಕ್ಷದಲ್ಲೂ ಅಭ್ಯರ್ಥಿ ಆಯ್ಕೆ ಕಗ್ಗಂಟು

ತೇರದಾಳ ಕ್ಷೇತ್ರ: ಬಿಜೆಪಿ-ಕಾಂಗ್ರೆಸ್‌ ಎರಡೂ ಪಕ್ಷದಲ್ಲೂ ಅಭ್ಯರ್ಥಿ ಆಯ್ಕೆ ಕಗ್ಗಂಟು

0

ಬಾಗಲಕೋಟೆ: ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಐತಿಹಾಸಿಕ ಪೈಪೋಟಿ ಹೊಂದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯೇ ಒಂದು ಸವಾಲಾಗಿ ಕಾಡುತ್ತಿದ್ದು, ಉಭಯ ಪಕ್ಷಗಳ ವರಿಷ್ಠರಲ್ಲಿ ಗೊಂದಲ ಸೃಷ್ಟಿಯಾಗುವಲ್ಲಿ ಕಾರಣವಾಗಿದೆ.
ಬಿಜೆಪಿಯಿಂದ ಹಾಲಿ ಶಾಸಕ ಸಿದ್ದು ಸವದಿಯವರಿಗೆ ಟಿಕೆಟ್ ನೀಡದೆ ಸ್ಥಳೀಯ ನೇಕಾರ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ದೆಹಲಿಯಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿವಾಸದೆದುರು ಟಿಕೆಟ್‌ಗೆ ಹೋರಾಟ ನಡೆಸುವಲ್ಲಿ ನೇಕಾರ ಮುಖಂಡರು ಕಾರಣರಾದರು.
ಸದ್ಯದಲ್ಲಿಯೇ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ಹೈಕಮಾಂಡ್ ಮಟ್ಟದಲ್ಲಿ ಅಭ್ಯರ್ಥಿಗಳ ಹೆಸರು ಹೋಗಿದ್ದು, ಶೀಘ್ರವೇ ಶರಾ ಬರೆಯುವ ಕೊನೆಯ ಕ್ಷಣದವರೆಗೂ ನೇಕಾರ ಸಮುದಾಯದಿಂದ ಟಿಕೆಟ್‌ಗಾಗಿ ಹೋರಾಟ ನಿಂತಿಲ್ಲ.
ಒಟ್ಟಾರೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಈ ಬಾರಿ ತೇರದಾಳ ತೀವ್ರ ಬಿಸಿಯಾಗುವಲ್ಲಿ ಕಾರಣವಾಗಿದ್ದು, ಬಂಡಾಯದ ಅಭ್ಯರ್ಥಿಗಳು ಸನ್ನದ್ಧವಾಗುವ ಎಲ್ಲ ಲೆಕ್ಕಾಚಾರಗಳು ಕಂಡು ಬರುತ್ತಿದ್ದು, ಎರಡೂ ಪಕ್ಷಗಳು ಇದರ ಶಮನಕ್ಕೆ ಯಾವ ಯಾವ ಲೆಕ್ಕಾಚಾರ ಹಾಕಲಿದ್ದಾರೆಂಬುದು ಕಾದು ನೋಡಬೇಕಿದೆ.

Exit mobile version