Home ತಾಜಾ ಸುದ್ದಿ ತಮಿಳುನಾಡಿಗೆ ನೀರು: ಮಹಿಳೆಯರಿಂದ ಒನಕೆ ಪ್ರತಿಭಟನೆ

ತಮಿಳುನಾಡಿಗೆ ನೀರು: ಮಹಿಳೆಯರಿಂದ ಒನಕೆ ಪ್ರತಿಭಟನೆ

0

ಶ್ರೀರಂಗಪಟ್ಟಣ: ತಮಿಳುನಾಡಿಗೆ ನೀರು ಹರಿಸುತ್ತುರುವ ರಾಜ್ಯ‌ ಸರ್ಕಾರದ ಕ್ರಮವನ್ನು ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಮಹಿಳೆಯರು ಒನಕೆ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದರು.
ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ಸಮಿತಿಯ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ಪಟ್ಟಣದ ಸ್ನಾನಘಟ್ಟೆ ಬಳಿಯ ಕಾವೇರಿ ನದಿಯಲ್ಲಿನ ಕಾವೇರಿ ಮಾತೆಗೆ ಮಹಿಳೆಯರು ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ತಾಲ್ಲೂಕು ಕಚೇರಿ ವರೆಗೆ ಒನಕೆ ಹಿಡಿದು ಸರ್ಕಾರದ ವಿರುದ್ದ ಘೋಷಣೆ ಕೂಗಿ ಮೆರವಣಿಗೆ ನಡೆಸಿದ ಮಹಿಳೆಯರು, ಸರ್ಕಾರ ಹಾಗೂ ನೀರಾವರಿ ಪ್ರಾಧಿಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿ, ನಮ್ಮ ನೀರನ್ನು ನಮಗೆ ಕೊಡಿ ಎಂದು ಒತ್ತಾಯಿಸಿದರು.
ನಂತರ ತಾಲ್ಲೂಕು ಕಚೇರಿ ಎದುರು ಸುಮಾರು ಒಂದು ಗಂಟೆ ಸಮಯ ಪ್ರತಿಭಡನೆ ನಡೆಸಿ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿ ರಾಜ್ಯದ ಶಾಸಕರು, ಸಂಸದರು ಕಾವೇರಿ ನೀತಿನ ರಕ್ಷಣೆಗೆ ಬರುವಂತೆ ಒನಕೆ ಪ್ರದರ್ಶನದ ಮೂಲಕ ಎಚ್ಚರಿಕೆ ನೀಡಿದರು. ತಾಲ್ಲೂಕಿನ‌ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ ನೀರಾವರಿ ಸಚಿವ ಡಿಕೆ ಶಿವಕುಮಾರ್ ರನ್ನು ವಜಾಗೊಳಿಸುತೆ ಒತ್ತಾಯಿಸಿದರು.

Exit mobile version