Home ನಮ್ಮ ಜಿಲ್ಲೆ ಕೊಪ್ಪಳ ಜನಾರ್ಧನರೆಡ್ಡಿಯಿಂದಲೇ ರಾಜಕೀಯಕ್ಕೆ ಬಂದೆ: ಆನಂದ್ ಸಿಂಗ್

ಜನಾರ್ಧನರೆಡ್ಡಿಯಿಂದಲೇ ರಾಜಕೀಯಕ್ಕೆ ಬಂದೆ: ಆನಂದ್ ಸಿಂಗ್

0
anand singh

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಆತ್ಮೀಯ ಸ್ನೇಹಿತರು. ಇವರಿಂದಲೇ ನಾನು ರಾಜಕೀಯ ಬಂದಿದ್ದೇನೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಾಗ ನನಗೆ ಬೆನ್ನು ತಟ್ಟಿದ್ದರು. ಅವರು ಹೊಸ ಪಕ್ಷ ಕಟ್ಟಿದ್ದಾರೆ. ಅವರಿಗೆ ಶುಭಾಶಯ ಕೋರುತ್ತೇನೆ. ಅವರನ್ನು ಮನವೊಲಿಸುವ ದೊಡ್ಡವ್ಯಕ್ತಿ ನಾನಲ್ಲ. ಇವರ ನಡೆಯಿಂದ ಬಿಜೆಪಿಗೆ ಲಾಭ ಆಗಲಿದೆಯೋ, ನಷ್ಟ ಆಗಲಿದೆಯೋ ಎಂಬುದು ನಮ್ಮ ನಾಯಕರ ಗಮನಕ್ಕಿದೆ. ಎಷ್ಟೇ ಪಕ್ಷಗಳು ಬಂದರೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದರು.

Exit mobile version