ಬೆಂಗಳೂರು: ಚಂದ್ರಯಾನ 3 ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದು ಚಂದ್ರನ ಮೇಲೆ ಅಧ್ಯಯನ ಪ್ರಾರಂಭಿಸಿರುವ ಪ್ರಗ್ಯಾನ್ ರೋವರ್ ಚಂದ್ರನ ತಾಪಮಾನದ ವರದಿ ಕಳುಹಿಸಿದೆ ಎಂದು ಇಸ್ರೋ ಸಂಸ್ಥೆ ತನ್ನ ಅಧಿಕೃತ ಟ್ವೀಟ್ ಮುಖಾಂತರ ತಿಳಿಸಿದೆ.
ಚಂದ್ರನ ಮಣ್ಣಿನ ತಾಪಮಾನದ ಬಗ್ಗೆ ಮಾಹಿತಿಯನ್ನು ರವಾನಿಸಿದೆ. ಚಂದ್ರನ ಮೇಲ್ಮೈನ 10 ಸೆಂ.ಮೀ ಮಣ್ಣಿನ ತಾಪಮಾನದ ಮಾಹಿತಿಯನ್ನು ಪ್ರಗ್ಯಾನ್ ರೋವರ್ ನೀಡಿದ್ದು, ಇಸ್ರೋ ಮಾಹಿತಿಯನ್ನು ಹಂಚಿಕೊಂಡಿದೆ. ಮೈನಸ್ 10 ಡಿಗ್ರಿ ಸೆಲ್ಸಿಯಸ್ನಿಂದ 60 ಡಿಗ್ರಿವರೆಗೆ ತಾಪಮಾನ ಇದೆ ಎಂದು ರೋವರ್ ಮಾಹಿತಿ ನೀಡಿದ್ದು, ಅದನ್ನು ಇಸ್ರೋ ಗ್ರಾಫ್ ಸಮೇತ ವಿವರಿಸಿದೆ. ಈ ಮುಂಚೆ ಶಿವಶಕ್ತಿ ಪಾಯಿಂಟ್‌ನಲ್ಲಿ ಪ್ರಜ್ಞಾನ್ ರೋವರ್ 12 ಮೀಟರ್‌ನಷ್ಟು ದೂರ ಚಲಿಸಿ ಬಲಕ್ಕೆ ತಿರುಗಿ ನಿಲ್ಲುವ ವಿಡಿಯೋವನ್ನು ಇಸ್ರೋ ರಿಲೀಸ್ ಮಾಡಿತ್ತು. 10 ಸೆನ್ಸಾರ್ಸ್ಗಳು ಚಂದ್ರನ 10 ಸೆ.ಮೀ ಆಳಕ್ಕೆ ಇಳಿದಿವೆ ಎಂದು ಇಸ್ರೋ ತಿಳಿಸಿದೆ.
