Home News ಗಣೇಶ ವಿಸರ್ಜನೆ: ಕುಣಿದು ಕುಪ್ಪಳಿಸಿದ ಸಂಸದ ಸಂಗಣ್ಣ

ಗಣೇಶ ವಿಸರ್ಜನೆ: ಕುಣಿದು ಕುಪ್ಪಳಿಸಿದ ಸಂಸದ ಸಂಗಣ್ಣ

ಕೊಪ್ಪಳ: ನಗರದಲ್ಲಿ 9ನೇ ದಿನದ ಗಣೇಶ‌ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಗುರುವಾರ ಡಿಜೆ ಹಾಗೂ ತಮಟೆ ಹಾಡಿಗೆ ಸಂಸದ ಸಂಗಣ್ಣ ಕರಡಿ ಕುಣಿದು ಕುಪ್ಪಳಿಸಿದರು‌.

ನಗರದ ಗಡಿಯಾರ ಕಂಬ ಶ್ರೀಗಜಾನನ ಮಿತ್ರ ಮಂಡಳಿ‌ ಹಾಗೂ ವಾರಕಾರ ಓಣಿಯ ವಿಜಯವಿನಾಯಕ ಮಿತ್ರ ಮಂಡಳಿ ಮತ್ತು ಕೋಟೆ ರಸ್ತೆಯ ಶ್ರೀವಿನಾಯಕ ಮಿತ್ರ ಮಂಡಳಿಯ ಗಣೇಶ ಮೂರ್ತಿಗಳನ್ನು ವಿಸರ್ಜನಾ ಮೆರವಣಿಗೆಯೂ ವಿಜೃಂಭಣೆಯಿಂದ ನಡೆಯಿತು.

ಸಾವಿರಾರು ಯುವಕರು ಡಿಜೆ ಹಾಡಿಗೆ ಹೆಜ್ಜೆ ಹಾಕಿದರು. ಬಣ್ಣದ ವಿದ್ಯುತ್ ದೀಪಗಳು ಕುಣಿಯುವ ಯುವಕರನ್ನು ಹುರಿದುಂಬಿಸುತ್ತಿದ್ದವು.

Exit mobile version